ನೌಕಾಪಡೆ ಪರೇಡ್ ಗೆ ಮಂಗಳೂರಿನ ದಿಶಾ ನೇತೃತ್ವ

Update: 2023-01-26 18:22 GMT

ಹೊಸದಿಲ್ಲಿ, ಜ.21:  ರಾಷ್ಟ್ರರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ನೌಕಾಪಡೆಯ  144  ಯೋಧರ ತುಕಡಿಯ ನೇತೃತ್ವವನ್ನು ಲೆ.ಕಮಾಂಡರ್ ದಿಶಾ ಅಮೃತ್ ವಹಿಸಿದ್ದರು. ಮೂಲತಃ ಮಂಗಳೂರಿನ ಬೋಳೂರು ಸಮೀಪದ ತಿಲಕ ನಗರ ನಿವಾಸಿಯಾದ ದಿಶಾ ಅಮೃತ್  ಪ್ರಸಕ್ತ ಅಂಡಮಾನ್ ನಿಕೋಬಾರ್ನಲ್ಲಿ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದಾರೆ.

ಪರೇಡ್ನಲ್ಲಿ ತಮ್ಮ ಪುತ್ರಿ ನೌಕಾಪಡೆ ತುಕಡಿಯ ನೇತೃತ್ವ ವಹಿಸಿ ಹೆಜ್ಜೆಹಾಕುವುದನ್ನು ವೀಕ್ಷಿಸಲೆಂದು ಅವರ ಹೆತ್ತವರಾದ ಅಮೃತಕುಮಾರ್ ಹಾಗೂ ಲೀಲಾ ದಂಪತಿ ದಿಲ್ಲಿ ಗೆ ತೆರಳಿದ್ದರು.

ದಿಶಾ ಅಮೃತ್ ಅವರು ನಗರದ  ಕೆನರಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ಅಧ್ಯನ ಮಾಡಿದ್ದರು. ಆನಂದತರ ಬೆಂಗಳೂರು ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಕಂಪ್ಯೂಟರ್ಸಯನ್ಸ್ನಲ್ಲಿ ಬಿ.ಇ.ಪದವಿ ಪಡೆದಿದ್ದು. 2016ರಲ್ಲಿ ನೌಕಾಪಡೆಗೆ ಆಯ್ಕೆಯಾದರು.

ಇದನ್ನು ಓದಿ: ಭಾರತದ ವೈವಿಧ್ಯಮಯ ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪರೇಡ್

Similar News