ಕಾರ್ಕಳ: ಮನೆಗೆ ಕನ್ನ; ಲಕ್ಷಾಂತರ ರೂ. ಕಳವು

Update: 2023-01-29 16:50 GMT

ಕಾರ್ಕಳ: ಶನಿವಾರ ಸಂಜೆಯ ಬಳಿಕ ತಾಲೂಕಿನ ಈದು ಗ್ರಾಮದ ಗಂಗೆನೀರು ಹದಿನಡ್ಕ ಎಂಬಲ್ಲಿ ಮನೆಯೊಂದಕ್ಕೆ ಕನ್ನ ಹಾಕಿದ ಯಾರೋ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದಾರೆ.

ಉಮೇಶ ಕುಲಾಲ್ ಎಂಬವರ ಮನೆಗೆ ನಿನ್ನೆ ಸಂಜೆ 4:00ರಿಂದ ಇಂದು ಬೆಳಗ್ಗೆ 8:00ಗಂಟೆಯ ನಡುವಿನ ಅವಧಿಯಲ್ಲಿ ಕನ್ನ ಹಾಕಿದ ಕಳ್ಳರು  ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಮನೆ ಯೊಳಗೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೆಜ್‌ನ ಬದಿಯಲ್ಲಿ ಇರಿಸಿದ್ದ ಬೀಗದಿಂದ ಲಾಕರ್‌ನ್ನು ತೆರೆದು ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ 105 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಹಾಗೂ 15,000ರೂ. ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಉಮೇಶ್ ಕುಲಾಲ್‌ರ ಪತ್ನಿ ಹರಿಣಾಕ್ಷಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Similar News