ಮೂರನೇ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ 9 ವಿಕೆಟ್ ಜಯ

Update: 2023-03-03 05:31 GMT

ಇಂದೋರ್:  ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್  ತಂಡ ನಿರೀಕ್ಷೆಯಂತೆಯೇ  ಭಾರತ ವಿರುದ್ಧ 9 ವಿಕೆಟ್ ನಿಂದ ಸುಲಭ ಜಯ ದಾಖಲಿಸಿದೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೊದಲ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ   ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದಿದೆ.

ಮೂರನೇ ದಿನವಾದ ಶುಕ್ರವಾರ ಗೆಲ್ಲಲು 76 ರನ್ ಗುರಿ ಬೆನ್ಟಟ್ಟಿದ ಆಸ್ಟ್ರೇಲಿಯ ತಂಡ 18.5 ಓವರ್ ಗಳಲ್ಲಿ  1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ.

ಆರ್. ಅಶ್ವಿನ್ ಆರಂಭಿಕ ಬ್ಯಾಟರ್ ಉಸ್ಮಾನ್  ಖ್ವಾಜಾ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆದರೆ ಭಾರತೀಯರು ಪ್ರವಾಸಿಗರಿಗೆ ಒತ್ತಡ ಹೇರುವಲ್ಲಿ ವಿಫಲವಾದರು. ಟ್ರಾವಿಸ್ ಹೆಡ್ (ಔಟಾಗದೆ 49) ಹಾಗೂ ಲ್ಯಾಬುಶೇನ್(ಔಟಾಗದೆ 28) ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ 2ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 78 ರನ್ ಗಳಿಸಿತು.

ಗುರುವಾರ ಭಾರತವನ್ನು 2ನೇ ಇನಿಂಗ್ಸ್ ನಲ್ಲಿ ಕೇವಲ 163 ರನ್ ಗೆ ಆಲೌಟ್ ಮಾಡಿದ ಆಸ್ಟ್ರೇಲಿಯವು 76 ರನ್ ಗುರಿ ಪಡೆದಿತ್ತು. ಸ್ಪಿನ್ನರ್ ಲಿಯೊನ್ 8 ವಿಕೆಟ್ ಕಬಳಿಸಿದ್ದರು.

Similar News