ಉಳ್ಳಾಲ: ಹೆದ್ದಾರಿ ಬದಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ
Update: 2023-03-10 16:57 GMT
ಉಳ್ಳಾಲ: ಹೆದ್ದಾರಿ ಬದಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮರ, ಗಿಡಗಂಟೆಗಳು ಹೊತ್ತಿ ಉರಿದಿದ್ದು, ವಸತಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸುತ್ತಿರುವುದನ್ನ ಕಂಡ ಹೆದ್ದಾರಿ ಗಸ್ತಿನಲ್ಲಿದ್ದ ಟ್ರಾಫಿಕ್ ಪೊಲೀಸ್ ಟ್ಯಾಂಕರ್ ನೀರು ತರಿಸಿ ಬೆಂಕಿಯನ್ನ ನಂದಿಸಿದ ಘಟನೆ ಕೋಟೆಕಾರು, ಬೀರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ ಫಾರಂನಲ್ಲಿ ಶಾರ್ಟ್ ಸರ್ಕ್ಯುಟ್ ಉಂಟಾಗಿ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿ ಟ್ರಾನ್ಸ್ ಫಾರಂನಿಂದ ಅವಘಡ ನಡೆದಿಲ್ಲ ಎಂದು ಹೇಳಿದ್ದಾರೆ.