ಸಿರಾಜುಲ್ ಇಸ್ಲಾಮ್ ಅರೆಬಿಕ್ ಮದ್ರಸ ಮೂಳೂರು: ಅಧ್ಯಕ್ಷರಾಗಿ ಅಹ್ಮದ್ ಬಾವ ಆಯ್ಕೆ
Update: 2023-03-20 17:14 GMT
ಕಾಪು: ಮೂಳೂರು ಜುಮಾ ಮಸೀದಿ ಅಧೀನದ ಸಿರಾಜುಲ್ ಇಸ್ಲಾಮ್ ಅರೆಬಿಕ್ ಮದ್ರಸ ಇದರ ಅಧ್ಯಕ್ಷರಾಗಿ YBC ಅಹ್ಮದ್ ಬಾವ ಆಯ್ಕೆಯಾಗಿದ್ದಾರೆ.
ಮೂಳೂರು ಇಸ್ಲಾಂ ಅರೆಬಿಕ್ ಮದರಸದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಮಸೀದಿಯ ಅಧ್ಯಕ್ಷರಾದ ಸೈಯ್ಯದ್ ಮುರಾದ್ ಅಲಿ ಯವರ ಉಸ್ತುವಾರಿಯಲ್ಲಿ 2023-24 ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ YBC ಅಹ್ಮದ್ ಬಾವ, ಉಪಾಧ್ಯಕ್ಷರಾಗಿ ಶರೀಫ್ ಹಸ್ಸನ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಫಕೀರ್, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ನಿಟ್ಟೆ, ಕೋಶಾಧಿಕಾರಿಯಾಗಿ ಹಾಜಿ ಅಬ್ಬು ಮುಹಮ್ಮದ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.