ಸವಣೂರು ಉಮರ್ ಮುಸ್ಲಿಯಾರ್ ಅನುಸ್ಮರಣೆ
Update: 2023-03-23 15:28 GMT
ಉಪ್ಪಿನಂಗಡಿ: ಸಮಸ್ತ ಉಲಮಾ ಒಕ್ಕೂಟದ ಸಂದೇಶ ಪ್ರಚಾರ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡು ಹತ್ತಾರು ಮಸೀದಿಗಳಲ್ಲಿ ಸೇವೆಗೈದು ಸಾವಿರಾರು ವಿದ್ಯಾರ್ಥಿಗಳ ಗುರುವರ್ಯರಾಗಿ ಸಾತ್ವಿಕ ಜೀವನ ನಡೆಸಿದ ಮರ್ಹೂಂ ಸವಣೂರು ಉಮರ್ ಮುಸ್ಲಿಯಾರ್‌ರ ಅನುಸ್ಮರಣೆ ದಿಕ್ಸ್ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಆತೂರು ಕುಂಡಾಜೆ ರಹ್ಮಾನಿಯಾ ಮಸೀದಿಯಲ್ಲಿ ಜರಗಿತು.
ಎಸ್‌ಬಿ ದಾರಿಮಿಯ ನೇತೃತ್ವದಲ್ಲಿ ಉಮರ್ ಮುಸ್ಲಿಯಾರ್ ಕಬರ್ ಝಿಯಾರತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಖಾಸಿಂ ದಾರಿಮಿ ಕಿನ್ಯ, ಚಾಪಲ್ಲ ಬಾಖವಿ ಉಸ್ತಾದ್, ಹನೀಫ್ ದಾರಿಮಿ ಸುರಿಬೈಲು ಮಾತನಾಡಿದರು.
ಶಫೀಕ್ ಅಝ್ಹರಿ, ನಾಸಿರ್ ಫೈಝಿ, ಹಮೀದ್ ಹನೀಫಿ. ಸೈಪುದ್ದೀನ್ ಯಮಾನಿ, ಅಬ್ದಲ್ಲಾ ಹಾಜಿ ಕುಂಡಾಜೆ, ಹಮೀದ್ ಕುಂಡಾಜೆ ಮತ್ತಿತರರು ಉಪಸ್ಥಿತರಿದ್ದರು.