ಮರದಿಂದ ಬಿದ್ದ ಗಾಯಾಳು ಬಾಲಕ ಮೃತ್ಯು
Update: 2023-03-27 15:22 GMT
ಬೈಂದೂರು, ಮಾ.27: ಶಿರೂರು ಗ್ರಾಮದ ಅರ್ಮೆ ಕರಿಕಟ್ಟೆ ಎಂಬಲ್ಲಿನ ಮನೆಯ ಬಳಿಯ ಶಿರೂರು ರೈಲ್ವೆ ನಿಲ್ದಾಣದ ಬಳಿ ಮಾವಿನ ಮರದಿಂದ ಬಿದ್ದು ಗಾಯಗೊಂಡಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಶಿರೂರು ಗ್ರಾಮದ ಆರ್ಮೆ ಕರಿಕಟ್ಟೆಯ ಬಾತ್ಯಾ ಇರ್ಫಾನ್ ಎಂಬವರ ಮಗ ಬಾತ್ಯಾ ನೌಮನ್(15) ಎಂದು ಗುರುತಿಸಲಾಗಿದೆ.
ಮಾ.12ರಂದು ಸ್ನೇಹಿತರೊಂದಿಗೆ ಮನೆ ಸಮೀಪ ಮಾವಿನ ಕಾಯಿ ತೆಗೆಯಲು ಮರ ಹತ್ತಿದ್ದ ನೌಮನ್, ಆಕಸ್ಮಿಕವಾಗಿ ಕಾಲುಜಾರಿ ಮರದಿಂದ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೆ ಮಾ.27ರಂದು ಮೃತ ಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.