ಪ್ರಚೋದನಾತ್ಮಕ ಭಾಷಣ: ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲು
Update: 2023-03-30 10:44 GMT
ಮುಬೈ: ಜನವರಿ 29 ರಂದು ಮುಂಬೈಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ದ್ವೇಷದ ಭಾಷಣ ನೀಡಿದ ಆರೋಪದ ಮೇಲೆ ತೆಲಂಗಾಣದ ಉಚ್ಛಾಟಿತ ಬಿಜೆಪಿ (BJP) ಶಾಸಕ ಟಿ ರಾಜಾ ಸಿಂಗ್ (Raja Singh) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮುಂಬೈಯಲ್ಲಿ ಹಿಂದು ಸಕಲ್ ಸಮಾಜ್ ಆಯೋಜಿಸಿದ್ದ ರ್ಯಾಲಿಯಲ್ಲಿ ಸಿಂಗ್ ನೀಡಿದ ಭಾಷಣವನ್ನು ಪೊಲೀಸರು ಪರಾಮರ್ಶಿಸಿದ ನಂತರ ನಾಲ್ಕು ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಐಪಿಸಿಯ ಸೆಕ್ಷನ್ 153ಎ(I)ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸಿಂಗ್ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಗೋಶಮಹಲ್ ಕ್ಷೇತ್ರದ ಶಾಸಕರಾಗಿದ್ದಾರೆ.
ಆ ನಿರ್ದಿಷ್ಟ ರ್ಯಾಲಿಯನ್ನು ಹಿಂದು ಸಮುದಾಯದ, ಪ್ರಮುಖವಾಗಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಚರ್ಚಿಸಲು ಆಯೋಜಿಸಲಾಗಿತ್ತು.
ಇದನ್ನೂ ಓದಿ: ಮೊಸರಿನ ಪ್ಯಾಕೆಟ್ ನಲ್ಲಿ ʼದಹಿʼ ಬರಹ: ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ