ಕಾರ್ಕಳ: ದಾರಿದೀಪದ ಕಂಬಕ್ಕೆ ಆಂಬ್ಯುಲೆನ್ಸ್ ಢಿಕ್ಕಿ
Update: 2023-03-30 13:45 GMT
ಕಾರ್ಕಳ, ಮಾ.30; ಕಾರ್ಕಳ-ಉಡುಪಿ ಮಾರ್ಗ ಮದ್ಯೆ ಬಂಗ್ಲೆಗುಡ್ಡೆ ಬಳಿ ಡಿವೈಡರ್ ನ ದಾರಿದೀಪದ ಕಂಬಕ್ಕೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ.
ಕಾರ್ಕಳ ಖಾಸಗಿ ಆಸ್ಪತ್ರೆಯಿಂದ ಕಣ್ಣಿನ ಚಿಕಿತ್ಸೆ ಪಡೆದು ಹೆಬ್ರಿ ತಾಲೂಕು ಎಳ್ಳಾರೆ ಪರಿಸರದ ರೋಗಿಗಳನ್ನು ಮನೆಗೆ ಬಿಡಲು ತೆರಳುತ್ತಿರುವಾಗ ಘಟನೆ ನಡೆದಿದೆ.
ಎದುರಿನಿಂದ ಬಂದ ಬೈಕ್ ಸವಾರ ಎಡಕ್ಕೆ ತಿರುಗಿಸುವ ವೇಳೆ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಆಂಬುಲೆನ್ಸ್ ನಲ್ಲಿ ನಾಲ್ಕು ಮಂದಿ ರೋಗಿಗಳು ಸೇರಿ 9 ಮಂದಿ ಇದ್ದರು. ಆಂಬುಲೆನ್ಸ್ ಚಾಲಕ ಸಹಿತ ಇತರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.