ಗಾಂಜಾ ಮಾರಾಟ: ಓರ್ವನ ಬಂಧನ

Update: 2023-04-08 15:18 GMT

ಬೈಂದೂರು, ಎ.8: ಬೈಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬೈಂದೂರು ಪೊಲೀಸರು ಎ.7ರಂದು ಸಂಜೆ ವೇಳೆ ಪಡುವರಿ ಗ್ರಾಮದ ಒತ್ತಿನಾಣೆ ಹೇನುಬೇರು ಸಮೀಪ ಬಂಧಿಸಿದ್ದಾರೆ.

ಆಶಿಕ್ ಖಾರ್ವಿ (20) ಬಂಧಿತ ಆರೋಪಿ.

ಈತನಿಂದ 44 ಗ್ರಾಂ ಗಾಂಜಾ ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News