ಸರಕಾರಿ ಜಾಗದಲ್ಲಿ ಅನಧಿಕೃತ ಕಾಮಗಾರಿ ಕೈಗೊಂಡಲ್ಲಿ ಕಾನೂನು ಕ್ರಮ ಜಾರಿ: ಮಲ್ಪೆ ಅಭಿವೃದ್ಧಿ ಸಮಿತಿ
Update: 2023-04-20 14:03 GMT
ಉಡುಪಿ, ಎ.20: ಮಲ್ಪೆ ಬೀಚ್ ಉತ್ತರ ಭಾಗದ ಪ್ರದೇಶದಲ್ಲಿರುವ ಸರಕಾರಕ್ಕೆ ಸೇರಿದಂತಹ ಖಾಲಿ ಜಾಗದ ಸರ್ವೇ ಪ್ರಕ್ರಿಯೆಯು ಈಗಾಗಲೇ ಮುಕ್ತಾಯಗೊಂಡಿದ್ದು, ಈ ಪ್ರದೇಶದಲ್ಲಿ ಕೆಲವೊಂದು ವ್ಯಕ್ತಿಗಳು ಅನಧಿಕೃತ ವಾಗಿ ಮಣ್ಣನ್ನು ಹಾಕಿ ಜಾಗವನ್ನು ಸಮತಟ್ಟು ಮಾಡುತ್ತಿರುವುದು ಮತ್ತು ಸರಕಾರಿ ಜಾಗದ ಅತಿಕ್ರಮಣ ಮಾಡುತ್ತಿ ರುವುದು ಕಂಡುಬಂದಿದೆ. ಇದು ಸಿಆರ್‌ಝಡ್ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಿದೆ.
ಆದ್ದರಿಂದ ಈ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು ಹಾಗೂ ಸರಕಾರಕ್ಕೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಅನಧಿಕೃತವಾಗಿ ಕಾಮಗಾರಿ ಕೈಗೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.