ಐಪಿಎಲ್: ಹೈದರಾಬಾದ್ ಗೆಲುವಿಗೆ 145 ರನ್ ಗುರಿ

Update: 2023-04-24 15:54 GMT

ಹೈದರಾಬಾದ್, ಎ.24: ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನ 34ನೇ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 145 ರನ್ ಗುರಿ ನೀಡಿದೆ.

ಸೋಮವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಪರ ಮನೀಶ್ ಪಾಂಡೆ (34 ರನ್, 27 ಎಸೆತ), ಅಕ್ಷರ್ ಪಟೇಲ್ (34 ರನ್, 34 ಎಸೆತ), ಮಿಚೆಲ್ ಮಾರ್ಷ್ (25 ರನ್, 15 ಎಸೆತ) ಹಾಗೂ ಡೇವಿಡ್ ವಾರ್ನರ್ (21 ರನ್, 20 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

 ಹೈದರಾಬಾದ್ ಪರ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್(3-28) ಹಾಗೂ ವೇಗದ ಬೌಲರ್ ಭುವನೇಶ್ವರ ಕುಮಾರ್ (2-6)ಐದು ವಿಕೆಟ್‌ಗಳನ್ನು ಹಂಚಿಕೊಂಡು ಡೆಲ್ಲಿ ಬ್ಯಾಟರ್‌ಗಳನ್ನು ಕಾಡಿದರು.

ಉತ್ತಮವಾಗಿ ಫೀಲ್ಡಿಂಗ್ ಮಾಡಿದ ಹೈದರಾಬಾದ್ ತಂಡದ ಆಟಗಾರರು ಮನೀಶ್ ಪಾಂಡೆ, ರಿಪಾಲ್ ಪಟೇಲ್ (5 ರನ್) ಹಾಗೂ ಅನ್ರಿಚ್ ನೋರ್ಟ್ಜೆ(2 ರನ್)ಅವರನ್ನು ರನೌಟ್ ಮಾಡಿದರು. 

Similar News