ಐಪಿಎಲ್: 7,000 ರನ್ ಗಳಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ

Update: 2023-05-06 16:53 GMT

ಹೊಸದಿಲ್ಲಿ, ಮೇ 6: ವಿರಾಟ್ ಕೊಹ್ಲಿ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 7000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಬ್ಯಾಟರ್ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ತನ್ನ 233ನೇ ಐಪಿಎಲ್ ಪಂದ್ಯದ ವೇಳೆ 7,000 ರನ್ ಪೂರೈಸಿದ್ದಾರೆ.

ಕೊಹ್ಲಿ 55 ರನ್ ಗಳಿಸಿ ಔಟಾಗುವ ಮೊದಲು ಐಪಿಎಲ್‌ನಲ್ಲಿ ತನ್ನ 50ನೇ ಅರ್ಧಶತಕವನ್ನು ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ 213 ಪಂದ್ಯಗಳಲ್ಲಿ 6,536 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ಡೆಲ್ಲಿ ನಾಯಕ ಡೇವಿಡ್ ವಾರ್ನರ್(171 ಪಂದ್ಯಗಳು 6,189 ರನ್) ಹಾಗೂ ರೋಹಿತ್ ಶರ್ಮಾ(237 ಪಂದ್ಯಗಳು, 6,063 ರನ್)ಆ ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಪ್ರಸಕ್ತ ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ ಒಟ್ಟು 419 ರನ್ ಗಳಿಸಿದ್ದಾರೆ. ಆರು ಅರ್ಧಶತಕಗಳನ್ನು ಗಳಿಸಿದ್ದು, ಔಟಾಗದೆ 82 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
 

Similar News