'ರೈಟಿಂಗ್ ವಿದ್ ಫೈರ್' ಸಾಕ್ಷ್ಯಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

Update: 2023-05-12 13:08 GMT

ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ "ತಳಹಂತದ, ಮಹಿಳಾವಾದಿ ಮತ್ತು ಸ್ವತಂತ್ರ" ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಪತ್ರಕರ್ತೆಯರ "ಖಬರ್ ಮಹಾರಿಯಾ" ಬಗೆಗಿನ ಸಾಕ್ಷ್ಯಚಿತ್ರ ’ರೈಟಿಂಗ್ ವಿದ್ ಫೈರ್’ 83ನೇ ಪಿಯಾಬಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ರಿಂಟು ಥಾಮಸ್ ಹಾಗೂ ಸುಷ್ಮಿತ್ ಘೋಷ್ ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

"ಲಿಂಗತ್ವ ಹಾಗೂ ವರ್ಗ ತಾರತಮ್ಯದ ನಡುವೆಯೂ ಪತ್ರಿಕೋದ್ಯಮ ಬಗೆಗಿನ ಒಲವು ಮತ್ತು ಸಾಹಸವನ್ನು ನಿರ್ದೇಶಕರಾದ ರಿಂಟು ಥಾಮಸ್ ಮತ್ತು ಸುಷ್ಮಿತ್ ಘೋಷ್ ಸುಂದರವಾಗಿ ಬಿಂಬಿಸಿದ್ದಾರೆ" ಎಂದು ಪಿಯಾಬಡಿ ವೆಬ್‌ಸೈಟ್ ಹೇಳಿದೆ. "ಪಿಯಾಬಡಿ ಪ್ರಶಸ್ತಿ ನಮ್ಮ ದೇಶಕ್ಕೆ ಬಂದಿರುವುದು ಸಂತಸದ ವಿಷಯ" ಎಂದು ಥಾಮಸ್ ಪೋಸ್ಟ್ ಮಾಡಿದ್ದಾರೆ. "ಈ ಚಿತ್ರ ನನ್ನ ಪಾಲಿಗೆ ಒಂದು ಪಯಣ, ಸಂವಾದ ಮತ್ತು ಪ್ರತಿಬಿಂಬ" ಎಂದು ಅವರು ಕಳೆದ ತಿಂಗಳು ಟ್ವೀಟ್ ಮಾಡಿದ್ದರು.

94 ನಿಮಿಷಗಳ ಈ ಸಾಕ್ಷ್ಯಚಿತ್ರ ಹಲವು ಜಾಗತಿಕ ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದೆ.

1940ರಲ್ಲಿ ಅಮೆರಿಕದ ನ್ಯಾಷನಲ್ ಅಸೋಸಿಯೇಶನ್ ಆಫ್ ಬ್ರಾಡ್‌ಕಾಸ್ಟರ್ಸ್‌ ಆರಂಭಿಸಿದ ಪಿಯಾಬಡಿ ಪ್ರಶಸ್ತಿಯ ಕಥಾನಕಗಳು, "ಸಾಮಾನಿಕ ಸಮಸ್ಯೆಗಳನ್ನು ಮತ್ತು ನಮ್ಮ ದಿನಮಾನದ ಅದಮ್ಯ ವಿಕಾಸಶೀಲ ಧ್ವನಿಗಳನ್ನು ಪ್ರಬಲವಾಗಿ ಪ್ರತಿಬಿಂಬಿಸುತ್ತವೆ" ಎಂದು ಸಂಸ್ಥೆಯ ವೆಬ್‌ಸೈಟ್ ಹೇಳಿದೆ. "ರೈಟಿಂಗ್ ವಿದ್ ಫೈರ್" 2022ರ ಅಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಖಬರ್ ಲಹಾರಿಯಾ ತನ್ನ ವೆಬ್‌ಸೈಟ್‌ನಲ್ಲಿ ಈ ಚಿತ್ರವನ್ನು ಚಲನಶೀಲ ಮತ್ತು ಪ್ರಭಾವಿ ಸಾಕ್ಷ್ಯಚಿತ್ರ ಎಂದು ಬಣ್ಣಿಸಿದೆ. ಆದರೆ ಇದರ ಚಿತ್ರಕಥೆ ನಮ್ಮ ಪಯಣದ ಅರ್ಧಭಾಗವನ್ನು ಮಾತ್ರ ಸೆರೆಹಿಡಿದಿದೆ. ಭಾಗಶಃ ಕಥೆಗಳು ಕೆಲವೊಮ್ಮೆ ವಿಮುಖವಾಗಿವೆ ಎಂದೂ ಸೇರಿಸಿದೆ.

Similar News