ಯಶಸ್ಸಿನ ಮೊದಲ ಘಟ್ಟ ವಿದ್ಯಾರ್ಥಿ ಜೀವನ: ಅನಂತಪದ್ಮನಾಭ ಐತಾಳ್

Update: 2023-05-18 12:53 GMT

ಕೋಟ: ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಮೊದಲ ಘಟ್ಟವೇ ವಿದ್ಯಾರ್ಥಿ ಜೀವನ ಆಗಿರುತ್ತದೆ. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೊ ಅದೇ ರೀತಿ ಪೋಷಕ ಪಾತ್ರವು ಅಷ್ಟೆ ಗಣನೀವಾಗಿರುತ್ತದೆ ಎಂದು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ ನಿಕಟಪೂರ್ವ ಅಧ್ಯಕ್ಷ ಕೆ.ಅನಂತ ಪದ್ಮನಾಭ ಐತಾಳ್ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಯುವಕ ಮಂಡಲದ ನೇತೃತ್ವದಲ್ಲಿ  ಈ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ  ನಾಲ್ಕನೇ ರ್ಯಾಂಕ್ ಪಡೆದ ಕೋಟತಟ್ಟು ಬಾರಿಕೆರೆ ನಿವಾಸಿ ಸಾತ್ವಿಕ್ ಕಾಂಚನ್ ಇವರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಈ ವೇಳೆ  ಸಾಧಕ ವಿದ್ಯಾರ್ಥಿ ಸಾತ್ವಿಕ್ ಕಾಂಚನ್ ಬಾರಿಕೆರೆ ಇವರಿಗೆ ಪುಸ್ತಕ ಪರಿಕರದ ಜೊತೆಗೆ ಗಿಡ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದರು.

ಈ ಸಂದರ್ಭದಲ್ಲಿ ಪಂಚವರ್ಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಮಾವಿನಕಟ್ಟೆ ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ರವೀಂದ್ರ ಕಾಂಚನ್, ವಿದ್ಯಾರ್ಥಿ ಪೋಷಕರಾದ ಪ್ರೇಮ ರಾಜು ಮೊಗವೀರ, ಚಂದ್ರ ಕಾಂಚನ್, ಪಂಚವರ್ಣ ಯುವಕ ಮಂಡಲದ ಸದಸ್ಯರಾದ ಶಶಿಧರ ಕಾಂಚನ್, ಸಂತೋಷ್ ಸಾಲಿಯಾನ್, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು, ಉಪಾಧ್ಯಕ್ಷೆ ವಸಂತಿ ಹಂದಟ್ಟು, ಅಕ್ಷತಾ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Similar News