ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ, ಚೆನ್ನೈ ಗೆಲುವಿಗೆ 15 ಓವರ್‌ಗಳಲ್ಲಿ 171 ರನ್ ಗುರಿ
Update: 2023-05-29 18:37 GMT
ಅಹಮದಾಬಾದ್: ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯವನ್ನು ಗೆಲ್ಲಲು 215 ರನ್ ಕಠಿಣ ಗುರಿ ಪಡೆದಿದ್ದ ಚೆನ್ನೈ 0.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಋತುರಾಜ್ ಗಾಯಕ್ವಾಡ್ ಔಟಾಗದೆ 4 ರನ್ ಗಳಿಸಿದರು.
ರಾತ್ರಿ 12:10ಕ್ಕೆ ಪಂದ್ಯವನ್ನು ಪುನರಾರಂಭಿಸಿ 15 ಓವರ್ ಪಂದ್ಯವನ್ನಾಡಲು ನಿರ್ಧರಿಸಲಾಯಿತು. ಚೆನ್ನೈ ತಂಡಕ್ಕೆ ಗೆಲ್ಲಲು ಪರಿಷ್ಕೃತ ಗುರಿ 171 ರನ್ ನೀಡಲಾಯಿತು.
ಇದಕ್ಕೂ ಮೊದಲು ಸಾಯಿ ಸುದರ್ಶನ್(96 ರನ್, 47 ಎಸೆತ, 8 ಬೌಂಡರಿ, 6 ಸಿಕ್ಸರ್) ಹಾಗೂ ವೃದ್ದಿಮಾನ್ ಸಹಾ(54 ರನ್, 39 ಎಸೆತ,5 ಬೌಂಡರಿ, 1 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 215 ರನ್ ಗುರಿ ನೀಡಿತ್ತು.