ಇಸ್ಕಾನ್ ದೇವಸ್ಥಾನವನ್ನು ಮಸೀದಿಯೆಂದು ಬಿಂಬಿಸಿ ಒಡಿಶಾ ರೈಲು ದುರಂತಕ್ಕೆ ಕೋಮುಬಣ್ಣ ನೀಡಿದ ಬಲಪಂಥೀಯರು
ಹೊಸದಿಲ್ಲಿ: ಒಡಿಶಾದ ಬಾಲಾಸೋರ್ ಬಳಿ ರೈಲು ದುರಂತಕ್ಕೀಡಾಗಿ 288ಕ್ಕೂ ಹೆಚ್ಚು ಮಂದಿ ಮೃತಪಟ್ಟು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ದುರಂತಕ್ಕೀಡಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವಾರು ಫೋಟೊ ವೀಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು. ಈ ನಡುವೆ ಈ ಪ್ರಕರಣಕ್ಕೆ ಕೋಮು ಬಣ್ಣ ನೀಡಿ, ರೈಲ್ವೆ ಹಳಿಯ ಬಳಿ ಮಸೀದಿಯಿತ್ತು ಎಂದು ಫೋಟೊವೊಂದನ್ನು ಬಲಪಂಥೀಯ ಬಳಕೆದಾರರು ವ್ಯಾಪಕ ಶೇರ್ ಮಾಡಿದ್ದು, ಆದರೆ ಇದು ಸುಳ್ಳು ಹರಡಿ ಜನರನ್ನು ವಿಭಜಿಸುವ ತಂತ್ರ ಎಂದು altnews.in ತನ್ನ ವರದಿಯಲ್ಲಿ ತಿಳಿಸಿದೆ.
ಟ್ವಿಟರ್ ನ Randomsena ಎಂಬ ಖಾತೆಯಲ್ಲಿ ದುರಂತಕ್ಕೀಡಾದ ರೈಲಿನ ಫೋಟೊದೊಂದಿಗೆ ಪಕ್ಕದಲ್ಲಿದ್ದ ಕಟ್ಟಡವನ್ನು ಮಸೀದಿಯೆಂದು ಗುರುತಿಸಿ, ದುರಂತ ನಡೆದ ದಿನ ಶುಕ್ರವಾರ ಎಂಬುವುದನ್ನು ಬೆಟ್ಟು ಮಾಡಿ ಮುಸ್ಲಿಮರನ್ನು ಹೊಣೆಯಾಗಿಸಲು ಪ್ರಯತ್ನಿಸಿತ್ತು. ಈ ಪೋಸ್ಟ್ ಮತ್ತು ಇನ್ನಿತರ ಹಲವಾರು ಪೋಸ್ಟ್ ಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು.
ಈ ಫೋಟೊವನ್ನು ಬೆನ್ನುಹತ್ತಿದ altnews.in ಸ್ಥಳದಲ್ಲಿರುವ ಪತ್ರಕರ್ತರನ್ನು ಸಂಪರ್ಕಿಸಿ ಫೋಟೊದ ನೈಜತೆ ತಿಳಿಯಲು ಯತ್ನಿಸಿದಾಗ, ಅದು ಮಸೀದಿಯಾಗಿರದೇ, ಇಸ್ಕಾನ್ ದೇವಾಲಯವೆನ್ನುವುದು ಸ್ಪಷ್ಟವಾಗಿದೆ.
ಕೃಪೆ: Altnews.in
Just Saying
— The Random Indian (@randomsena) June 3, 2023
Yesterday Was Friday pic.twitter.com/HWz3zoCnS0