ಮಣಿಪಾಲದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅಕಸ್ಮಿಕ
Update: 2023-06-04 15:49 GMT
ಮಣಿಪಾಲ, ಜೂ.4: ಈಶ್ವರನಗರದ ಸಮೀಪದ ಹಕುವ ಮಟಾಟ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಇಂದು ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿ ರುವ ಬಗ್ಗೆ ವರದಿಯಾಗಿದೆ.
ರೆಸ್ಟೋರೆಂಟ್‌ನ ಅಡುಗೆ ಕೋಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿ ಕೊಂಡಿತ್ತೆನ್ನ ಲಾಗಿದೆ. ಇದರಿಂದ ಅಡುಗೆಕೋಣೆಯ ಸಲಕರಣೆ, ಫ್ರಿಡ್ಜ್, ಅಡುಗೆ ಸಾಮಾನುಗಳು ಬೆಂಕಿಯಿಂದ ಸುಟ್ಟು ಹೋಗಿದೆ ಎಂದು ದೂರಲಾಗಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಅವಘಡದಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿರು ವುದಾಗಿ ತಿಳಿದುಬಂದಿದೆ.