ನಟಿಯರ ಸಂಘ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯಗೆ ನಟಿ ಸಂಜನಾ ಮನವಿ
Update: 2024-09-05 17:00 GMT
ಬೆಂಗಳೂರು : ನಟಿ ಸಂಜನಾ ಗಲ್ರಾನಿ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವವರ ಸುರಕ್ಷತೆಗಾಗಿ ಮಹಿಳಾ ಕಲಾವಿದರದ್ದೇ ಒಂದು ಸಂಘ ರಚಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಚಿತ್ರರಂಗಕ್ಕೆ ಬರುವ ಹೊಸ ಹುಡುಗಿಯರನ್ನು ಜಾಗೃತಿ ಗೊಳಿಸಬೇಕಾದ ಅಗತ್ಯವಿದೆ. ನಾವು ಹಿರಿಯ ನಟಿಯರು, ಎಲ್ಲಾ ಅನುಭವ ನಮಗಿದೆ. ‘ಸಿನೆಮಾ ರಂಗದಲ್ಲಿ ನೀವು ಈ ರೀತಿ ಇರಬೇಕು’ ಎಂದು ಹೇಳುವವರು ಇರುತ್ತಿದ್ದರೆ ಎಷ್ಟೋ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಟಿಯರಿಗಾಗಿಯೇ ಒಂದು ಸಂಘ ಸ್ಥಾಪಿಸಬೇಕಾಗಿದೆ. ಕೆಟ್ಟ ಜನ ಎಲ್ಲಾ ಚಿತ್ರ ರಂಗಗಳಲ್ಲೂ ಇರುತ್ತಾರೆ. ಅವರು ನಿಮ್ಮನ್ನು ಕೆಟ್ಟ ಕೆಲಸಕ್ಕೆ ಮಾತ್ರ ಬಳಸುತ್ತಾರೆ. ನಿಮ್ಮನ್ನು ಬೆಳೆಸುವುದಿಲ್ಲ, ಬೀದಿಯಲ್ಲಿ ಬಿಸಾಡಿ ಹೋಗುತ್ತಾರೆ.
ಸಂಜನಾ ಗಲ್ರಾನಿ, ನಟಿ