ಬೆಂಗಳೂರು: ತೆರಿಗೆ ಪಾವತಿಸದ ಆರೋಪ; ರಾಕ್ ಲೈನ್ ಮಾಲ್ ಗೆ ಬೀಗ ಜಡಿದ ಕಂದಾಯ ಇಲಾಖೆ

Update: 2024-02-14 04:57 GMT

ಬೆಂಗಳೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ದಾಸರಹಳ್ಳಿ ವ್ಯಾಪ್ತಿಯ ಜಾಲಹಳ್ಳಿಯಲ್ಲಿರುವ ರಾಕ್ ಲೈನ್ ಮಾಲ್ ಗೆ ಪಾಲಿಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸೀಲ್ ಮಾಡಿರುವ ಬಗ್ಗೆ ವರದಿಯಾಗಿದೆ.

2011 ರಿಂದ 2022-23 ರವರೆಗೆ ಪಾವತಿಸಬೇಕಾಗಿದ್ದ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾವತಿಸಲು ಪಾಲಿಕೆ ಡಿಮಾಂಡ್ ನೋಟೀಸ್ ನೀಡಿದ್ದರೂ, ಮಾಲ್ ನ ಮಾಲೀಕರು ತೆರಿಗೆ ಪಾವತಿಸಿರಲಿಲ್ಲ ಎನ್ನಲಾಗಿದೆ.

ಸ್ಥಳದಲ್ಲಿ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ದಾಸರಹಳ್ಳಿ, ವಲಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News