ಬೆಂಗಳೂರು | ಟ್ರಕ್ ಹರಿದು ಬಾಲಕ ಮೃತ್ಯು
ಬೆಂಗಳೂರು : ಟ್ರಕ್ ಹರಿದು ಬಾಲಕ ಮೃತಪಟ್ಟಿರುವ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಭಾನುತೇಜ (12) ಮೃತಪಟ್ಟಿದ್ದು, ಜೊತೆಗಿದ್ದ ಚಕ್ರಧರಣ್ ಎಂಬವರು ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಭಾನುತೇಜ ಕಳೆದ ಒಂದು ತಿಂಗಳಿನಿಂದ ತನ್ನ ಸಹೋದರ ಹಾಗೂ ವೇದಗುರು ಚಕ್ರಧರಣ್ ಜೊತೆ ಆರ್.ಟಿ.ನಗರದ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿದ್ದುಕೊಂಡು ವೇದಾಭ್ಯಾಸ ಮಾಡಿಕೊಂಡಿದ್ದ. ಶನಿವಾರ ಭಾನುತೇಜನ ಹುಟ್ಟು ಹಬ್ಬವಿದ್ದರಿಂದ ಇಬ್ಬರೂ ಹೊರಮಾವು ಬಳಿಯಿರುವ ಅಕ್ಕನ ಮನೆಗೆ ಹೋಗಿದ್ದರು ಎನ್ನಲಾಗಿದೆ.
ಆರ್.ಟಿ.ನಗರ ಕಡೆಗೆ ತೆರಳುತ್ತಿದ್ದ ಚಕ್ರಧರಣ್ ಅವರ ದ್ವಿಚಕ್ರ ವಾಹನಕ್ಕೆ ರಾತ್ರಿ 11:20ರ ಸುಮಾರಿಗೆ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಟ್ರಕ್ ಢಿಕ್ಕಿಯಾಗಿತ್ತು. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದ ಹಿಂಬದಿಯಿದ್ದ ಭಾನುತೇಜ ನೆಲಕ್ಕೆ ಬಿದ್ದಿದ್ದ. ಅದೇ ಸಂಧರ್ಭದಲ್ಲಿ ಭಾನುತೇಜನ ತಲೆ ಮೇಲೆ ಟ್ರಕ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.