ಬೆಂಗಳೂರು: ರಾಜರಾಜೇಶ್ವರಿ ರೋಟರಿ ಹಾಗೂ ಎಸ್‌ಸಿ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ಶಿಬಿರ
ಬೆಂಗಳೂರು, ಸೆ.13: ರಕ್ತದಾನ ಶಿಬಿರದಲ್ಲಿ 70 ಯುನಿಟ್‌ನಷ್ಟು ರಕ್ತ ಸಂಗ್ರಹವಾಗಿದೆ. ಕೆಲಸಗಾರರ ಆರೋಗ್ಯದ ಹಿತದೃಷ್ಟಿಯಲ್ಲಿ ಎರಡು ದಿನಗಳ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ಬಗೆಗಿನ ಜಾಗೃತಿಯು ಈ ಶಿಬಿರದಲ್ಲಿ ನಡೆಯುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಎಸ್‌ಸಿ ಸಂಸ್ಥೆಯ ಪಾಲುದಾರ ಚಂದ್ರಶೇಖರ್ ಕೆ.ಆರ್. ತಿಳಿಸಿದ್ದಾರೆ.
ಬುಧವಾರ ನಗರದ ಪೀಣ್ಯ ಇಂಡಸ್ಟ್ರೀಯಲ್ ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ರಾಜರಾಜೇಶ್ವರಿ ರೋಟರಿ ಹಾಗೂ ಎಸ್‌ಸಿ ಸಂಸ್ಥೆಯ ವತಿಯಿಂದ ನಡೆದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವಂತೆ ಕಾರ್ಖಾನೆಗಳಲ್ಲಿ ಕೂಡ ಶಿಬಿರ ನಡೆಸುವುದರಿಂದ ಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಲಾಗುತ್ತದೆ ಎಂದರು.
ರಾಜಾರಾಜೇಶ್ವರಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಪ್ರಶಾಂತ್ ಮಾತನಾಡಿ, ರೋಟರಿ ಕ್ಲಬ್‌ನಿಂದ ಮಹಿಳೆಯರ ಆರೋಗ್ಯ, ಮಾನಸಿಕ ಆರೋಗ್ಯ ಆಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ನಡೆಸಲಾಗಿದೆ ಎಂದರು.
ರಾಜಾರಾಜೇಶ್ವರಿ ರೋಟರಿ ಕ್ಲಬ್‌ನ ಕಮ್ಯೂನಿಟಿ ಸರ್ವಿಸ್ ತಂಡದ ನಿರ್ದೇಶಕ ಎ.ಆರ್.ಸಿ. ಸಿಂಧ್ಯಾ ಮಾತನಾಡಿ, ಆರೋಗ್ಯ ಶಿಬಿರದಲ್ಲಿ ಡೆಂಟಲ್ ಸ್ಕ್ರೀನಿಂಗ್, ಕಣ್ಣಿನ ಪರೀಕ್ಷಾ ಶಿಬಿರ ಸಹಿತವುಳ್ಳ ಹಲವು ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ 500ಕ್ಕೂ ಅಧಿಕ ಜನರು ಸದುಪಯೋಗ ಪಡೆದಿದ್ದಾರೆ. ಒಂದೇ ಕಡೆಯಲ್ಲಿ 7 ರೀತಿಯ ಆರೋಗ್ಯ ತಪಾಸಣೆಯ ಕಾರ್ಯಗಳು ನಡೆದಿದ್ದು, ಇದರಿಂದ ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಿದೆ ಎಂದರು.
ಶಿಬಿರದಲ್ಲಿ ಸಂಸ್ಥೆಯ ಪಾಲುದಾರ ಶಶಿಧರ್ ಬಿ.ವಿ ಮಾತನಾಡಿದರು. ವೈದ್ಯಕೀಯ ಸಿಬ್ಬಂದಿಗಳು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.