ಬೆಂಗಳೂರು | ಭಾರೀ ಅಗ್ನಿ ಅವಘಡ : 30ಕ್ಕೂ ಅಧಿಕ ವಾಹನ ಬೆಂಕಿಗಾಹುತಿ

Update: 2024-02-23 14:11 GMT

ಬೆಂಗಳೂರು : ಇಲ್ಲಿನ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲೇ ಇದ್ದ ಪಾಕಿರ್ಂಗ್ ಸ್ಥಳಕ್ಕೆ ವ್ಯಾಪಿಸಿದ್ದರಿಂದ ಸುಮಾರು 30ಕ್ಕೂ ಅಧಿಕ ವಾಹನಗಳು ಸುಟ್ಟು ಕರಕಲಾಗಿವೆ.

ಶುಕ್ರವಾರ ಮುಂಜಾನೆ ಗಂಗೊಂಡನಹಳ್ಳಿಯ ಗೋದಾಮುವೊಂದರಲ್ಲಿ ಹಳೇ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಇದರ ಪಕ್ಕದಲ್ಲಿಯೇ ವಾಹನಗಳನ್ನು ರಾತ್ರಿ ವೇಳೆ ಪೇ-ಪಾರ್ಕಿಂಗ್ ಮಾಡಲಾಗುತ್ತಿತ್ತು. ಚಾಲಕರು ತಮ್ಮ ಮನೆಯ ಬಳಿ ವಾಹನಗಳನ್ನು ನಿಲ್ಲಿಸಲು ಜಾಗದ ಅಭಾವ ಇರುವ ಕಾರಣ ಈ ಸ್ಥಳದಲ್ಲಿ ದಿನಕ್ಕೆ 30 ರೂ. ನೀಡಿ ರಾತ್ರಿ ವೇಳೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು.

ನಿನ್ನೆ ಈ ಸ್ಥಳದಲ್ಲಿ ಸುಮಾರು 30-35 ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಆದರೆ, ಮುಂಜಾನೆ 1.30ರ ಸುಮಾರಿನಲ್ಲಿ ಈ ಪ್ಲಾಸ್ಟಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶ ವ್ಯಾಪಿಸಿ ಧಗಧಗನೆ ಹೊತ್ತಿ ಉರಿಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News