ಬೆಂಗಳೂರು | ನಾಗವಾರ ಮೆಟ್ರೊ ನಿಲ್ದಾಣದ ಸುರಂಗ ಪೂರ್ಣ
Update: 2024-09-04 15:24 GMT
ಬೆಂಗಳೂರು: ಸುರಂಗ ಕೊರೆಯುವ ಯಂತ್ರ ತುಂಗಾ (ಟಿಬಿಎಂ) ಸೆ.4ರಂದು ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ.
ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ದಿನಾಂಕ ಫೆ.3ರಂದು ಕಾಮಗಾರಿ ಪ್ರಾರಂಭಮಾಡಿದ್ದು, ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ ಪೂರ್ಣಗೊಳಿಸಿದೆ.
ಈ ಪ್ರಗತಿಯೊಂದಿಗೆ, ಒಟ್ಟು 20,992 ಮೀ ಸುರಂಗ ಮಾರ್ಗದಲ್ಲಿ 20,58,2.7 ಮೀ ಅಂದರೆ ಶೇ 98ರಷ್ಟು ಪೂರ್ಣಗೊಂಡಿದೆ. ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ, ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿವೆ ಎಂದು ಪ್ರಕಟನೆ ತಿಳಿಸಿದೆ.