ಪಾಕಿಸ್ತಾನದ ಪ್ರಜೆಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದ ಆರೋಪಿಯ ಬಂಧನ

Update: 2024-10-07 13:42 GMT

ಬೆಂಗಳೂರು: ಅಕ್ರಮವಾಗಿ ಭಾರತದೊಳಗೆ ನುಸುಳಲು ಮತ್ತು ಬೆಂಗಳೂರಿನಲ್ಲಿ ನೆಲೆಯೂರಲು ಪಾಕಿಸ್ತಾನದ ಪ್ರಜೆಗಳಿಗೆ ಸಹಾಯ ಮಾಡಿದ್ದ ಆರೋಪದಡಿ ಓರ್ವನನ್ನು ಜಿಗಣಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತನನ್ನು ಮುಂಬೈ ಮೂಲದ ಪರ್ವೇಜ್ ಅಹ್ಮದ್(57) ಎಂದು ಗುರುತಿಸಲಾಗಿದೆ. ಈ ಆರೋಪಿಯು ಇತ್ತೀಚೆಗೆ ಬಂಧಿಸಲಾದ ಎರಡು ಪಾಕಿಸ್ತಾನದ ಕುಟುಂಬಗಳಿಗೆ ನಕಲಿ ಗುರುತಿನ ದಾಖಲೆಗಳನ್ನು ಒದಗಿಸುವ ಮೂಲಕ ಮತ್ತು ಆಧಾರ್ ಕಾರ್ಡ್ ಮತ್ತು ಪಾಸ್‍ ಪೋರ್ಟ್‍ಗಳನ್ನು ಪಡೆಯಲು ಸಹಾಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಎರಡು ಕುಟುಂಬಗಳು ಪರ್ವೇಜ್‍ನ ವಿವರಗಳನ್ನು ಬಹಿರಂಗಪಡಿಸಿದ ನಂತರ ನಗರದ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News