ಬೆಂಗಳೂರು | ಲೋಕಾಯುಕ್ತ ಬಲೆಗೆ ಬಿದ್ದ ಸಬ್ ಇನ್ಸ್‌ಪೆಕ್ಟರ್
Update: 2024-10-31 12:54 GMT
ಬೆಂಗಳೂರು : ಹಲ್ಲೆ ಪ್ರಕರಣ ಸಂಬಂಧ ದೂರುದಾರನಿಂದ ಲಂಚ ಪಡೆದ ಆರೋಪದಡಿ ವೈಟ್ ಫೀಲ್ಡ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಲ್ಲೆ ಮಾಡಿದವರನ್ನು ಬಂಧಿಸುವುದಾಗಿ ಹೇಳಿ ದೂರುದಾರನಿಂದ 50 ಸಾವಿರ ಲಂಚಕ್ಕೆ ಕೈಯೊಡಿದ್ದ ವೈಟ್‍ಫೀಲ್ಡ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಂಗಾಧರಯ್ಯ ಲಂಚ ಪಡೆಯುವಾಗ ಸಿಕ್ಕಿಬಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ವ್ಯಕ್ತಿಯೊಬ್ಬರು ತಮ್ಮ ಮೇಲೆ ಹಲ್ಲೆಯಾಗಿದ್ದು, ತಪ್ಪಿತಸ್ಥರನ್ನು ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ಸಬ್ ಇನ್ಸ್ ಪೆಕ್ಟರ್ 50 ಸಾವಿರ ರೂ.ಲಂಚ ನೀಡುವಂತೆ ಸೂಚಿಸಿದ್ದರು. ಮುಂಗಡವಾಗಿ 25 ಸಾವಿರ ಹಣ ಪಡೆಯುವಾಗ ಗಂಗಾಧರ್ ಸಿಕ್ಕಿಬಿದ್ದಿದ್ದಾರೆ, ಈ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.