ಬೆಂಗಳೂರು | ವಿಮಾನ ನಿಲ್ದಾಣದಲ್ಲಿ 23 ಕೆಜಿ ಮಾದಕ ವಸ್ತು ಜಪ್ತಿ; ಮೂವರ ಬಂಧನ
Update: 2025-01-16 15:21 GMT
ಬೆಂಗಳೂರು : ವಿದೇಶದಿಂದ ಕಾನೂನು ಬಾಹಿರವಾಗಿ ಮಾದಕ ವಸ್ತು ಸಾಗಾಟ ಪ್ರಕರಣವನ್ನು ಬೇಧಿಸಿರುವ ಕಸ್ಟಮ್ಸ್ ಅಧಿಕಾರಿಗಳು, 23 ಕೆಜಿ ಪ್ರಮಾಣದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‍ನಿಂದ ಅಕ್ರಮವಾಗಿ 23 ಕೆಜಿ ಗಾಂಜಾ ತಂದಿದ್ದ ಮೂವರನ್ನು ಬಂಧಿಸಿದ್ದು, ಎನ್‍ಡಿಪಿಎಸ್ ಖಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಂಧಿತ ಮೂವರು ಬ್ಯಾಂಕಾಕ್‍ನಿಂದ ಅಕ್ರಮವಾಗಿ ಹೈಡ್ರೋಫೋನಿಕ್ಸ್, ಮೈರವಾನ್ ಮತ್ತು ಹೂ ಸೇರಿದಂತೆ 23 ಕೆಜಿಯ ವಿವಿಧ ಬಗೆಯ ಗಾಂಜಾವನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡಿಕೊಂಡು ಲಗೇಜ್ ಬ್ಯಾಗ್‍ನಲ್ಲಿಟ್ಟುಕೊಂಡು ಕೆಐಎಬಿಗೆ ಬಂದಿದ್ದರು.ಈ ವೇಳೆ ಕೆಂಪೇಗೌಡ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.