ಸಿಇಟಿ ಪರೀಕ್ಷೆ: ಮಾಜಿ ಸೈನಿಕ, ಧಾರ್ಮಿಕ, ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸ್ಪಷ್ಟನೆ

Update: 2024-01-20 16:28 GMT

ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾಜಿ ಸೈನಿಕರಾಗಿದ್ದಲ್ಲಿ ಅಂಥವರು ಸೇವಾಸಿಂಧು ಪೋರ್ಟಲ್ ನಲ್ಲಿ ತಮ್ಮ ಸಿಇಟಿ ಅರ್ಜಿ ಸಂಖ್ಯೆ ಅಥವಾ ಆರ್ಮಿ ಸಂಖ್ಯೆಯನ್ನು ನಮೂದಿಸಿ `ಮಾಜಿ ಸೈನಿಕ ಪ್ರಮಾಣಪತ್ರ’ವನ್ನು ಪಡೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಶನಿವಾರ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ 7 ವರ್ಷ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆಯಾಗಿದ್ದಲ್ಲಿ 11 ಮತ್ತು 12ನೇ ತರಗತಿಗಳ ವ್ಯಾಸಂಗ ಪ್ರಮಾಣಪತ್ರಗಳನ್ನು ಅಪ್-ಲೋಡ್ ಮಾಡಬೇಕಾಗಿಲ್ಲ. ಮೇಲಿನ ದಾಖಲೆಗಳು ಸ್ಯಾಟ್ಸ್ ಡೇಟಾಬೇಸ್ ನಿಂದ ಬಂದಿದ್ದರೂ ಯಾವುದೇ ದಾಖಲಾತಿಗಳನ್ನು ಅಪ್-ಲೋಡ್ ಮಾಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಿಕ್ಕಂತೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೀಸಲು ಕೋರಿದ್ದಲ್ಲಿ ಅಂಥ ಅಭ್ಯರ್ಥಿಗಳು 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ದಾಖಲಾತಿಗಳನ್ನು ಸಲ್ಲಿಸಬೇಕು. ಆದರೆ ಈ ದಾಖಲಾತಿಗಳು ಬಿಇಒ/ಡಿಡಿಪಿಐ ಕಚೇರಿಗಳಿಗೆ ಆನ್‍ಲೈನ್ ಪರಿಶೀಲನೆಗೆ ಹೋಗುವುದರಿಂದ ಇವುಗಳನ್ನು ಶಾಲಾಕಾಲೇಜುಗಳಿಂದ ಪಡೆದರೆ ಸಾಕಾಗಿದ್ದು, ಇವುಗಳಿಗೆ ಬಿಇ/ಡಿಡಿಪಿಐ ಮೇಲು ಸಹಿ ಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಜ.19ರಂದು ಹೊರಡಿಸಿದ್ದ ಸೂಚನೆಗಳನ್ನು ಹಿಂಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News