ನಕಲಿ ರಸಗೊಬ್ಬರ ಮಾರಾಟ ಪ್ರಕರಣ ಸಿಐಡಿಗೆ ವಹಿಸಲಾಗಿದೆ : ಸಚಿವ ಚಲುವರಾಯಸ್ವಾಮಿ

Update: 2024-02-23 16:59 GMT

ಬೆಂಗಳೂರು : ರಾಜ್ಯದಲ್ಲಿ 9 ನಕಲಿ ರಸಗೊಬ್ಬ ಮಾರಾಟ 9 ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಪರಿಷತ್ತಿನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ನಕಲಿ ರಸಗೊಬ್ಬರ ಮಾರಾಟ ಮಾಡತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಕೆಲವು ಪ್ರಕರಣಗಳು ಅಂತರ ರಾಜ್ಯ ವ್ಯಾಪ್ತಿಗೆ ಒಳಪಡುವುದರಿಂದ ಹಾಗೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆ ಇದೆ. ಹೀಗಾಗಿ ಸಿಒಡಿಗೆ ವಹಿಸಲಾಗಿದೆ ಎಂದರು.

ನಕಲಿ ರಸಗೊಬ್ಬರ ಉತ್ಪಾದನೆ, ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬಂದ ಮೇಲೆ ಕೂಡಲೇ ಸದರಿ ರಸ ಗೊಬ್ಬರವನ್ನು ಜಪ್ತು ಮಾಡಿ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ, ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಳಪೆ ರಸಗೊಬ್ಬರ ಮಾದರಿಗಳಿಗೆ ಸಂಬಂಧಿಸಿದಂತೆ ರಸಗೊಬ್ಬರ(ನಿಯಂತ್ರಣ) ಆದೇಶ, 1985 ಕ್ಲಾಸ್ 19(ಬಿ)ರ ಉಲ್ಲಂಘನೆ ಸಂಬಂಧ ರಸಗೊಬ್ಬರ ಪರಿವೀಕ್ಷಕರು ಸಂಬಂಧಪಟ್ಟ ಮಾರಾಟಗಾರರು, ಸರಬರಾಜುದಾರರು, ಉತ್ಪಾದಕರ ವಿರುದ್ದ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 200ರಡಿ ಆ ವ್ಯಾಪ್ತಿಯ ನ್ಯಾಯಾಲಯದಲ್ಲಿ ನಿಯಮಾನುಸಾರ ಮೊಕದ್ದಮೆ ಹೂಡಿ ಕ್ರಮವಹಿಸಿದ್ದಾರೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News