ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು : ದೇವರಾಜೇಗೌಡ

Update: 2024-05-08 15:21 GMT

ಬೆಂಗಳೂರು : ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು. ಅದು ಕೂಡ ರಾಜಕೀಯ ಷಡ್ಯಂತ್ರ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಹನಿಟ್ರ್ಯಾಪ್ ಮಾಡಲು ಹೋಗಿ ಒಂದು ಗ್ಯಾಂಗ್ ವಿಫಲವಾಯ್ತು. ನಾನು ಕೂಡ ಸಂತ್ರಸ್ತ. ಈಗಾಗಲೇ ದೂರು ನೀಡಿದ್ದೇನೆ. ಆಗ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಪ್ರಜ್ವಲ್ ಪ್ರಕರಣದಲ್ಲಿ ಎಸ್‍ಐಟಿ ತನಿಖೆಗೆ ಕೊಟ್ಟ ನಂತರ ಎಫ್‍ಐಆರ್ ದಾಖಲಾಯಿತು. ಎಫ್‍ಐಆರ್ ಆದ ನಂತರ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣವಾಯಿತು ಎಂದರು.

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‍ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧವೂ ಎಫ್‍ಐಆರ್ ಆಗಿತ್ತು. ಆದರೆ, ಅದನ್ನು ಎಸ್‍ಐಟಿಗೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಕರೆಯುವ ಅಗತ್ಯವಿಲ್ಲ. ಆದರೂ, ಅಧಿಕಾರಿಗಳು ನನ್ನಿಂದ ಹೇಳಿಕೆ ಪಡೆದರು. ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡನೆಯದಾಗಿ ಪೆನ್‍ಡ್ರೈವ್ ಹಂಚಿಕೆ ಬಗ್ಗೆ ತನಿಖೆ ಆಗಬೇಕು. ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ ರಕ್ಷಣೆಯಾಗುತ್ತಿದೆ ಎಂದು ದೇವರಾಜೇಗೌಡ ಆರೋಪಿಸಿದರು.

ಈ ಹಿಂದೆ ಸಂಸದ ಪ್ರಜ್ವಲ್‍ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ನಡೆದಾಗ ಮೂರು ತಿಂಗಳ ಹಿಂದೆ ಸರಕಾರಕ್ಕೆ ಪತ್ರ ಬರೆದಿದ್ದೆ ಆದರೆ, ನ್ಯಾಯ ಸಿಗಲಿಲ್ಲ. ಈಗ ಅವರ ಪಕ್ಷದ ನಾಯಕರನ್ನೇ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದ್ದರಿಂದ ಅವರ ಪತ್ರವನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವುದು ಘೋರ ಅಪರಾಧ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ದೇವರಾಜೇಗೌಡ ತಿಳಿಸಿದರು.

ಇನ್ನು ಹಣಕ್ಕಾಗಿ ದೇವರಾಜೇಗೌಡ ಬಂದಿದ್ದ ಎಂಬ ಶಿವರಾಮೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ನಾನು ಅವರಿಗೆ ಕರೆ ಮಾಡಿಲ್ಲ, ಅವರೆ ಕರೆ ಮಾಡಿದ್ದರು. ಕೇಂದ್ರ ಸರಕಾರ ಹಾಗೂ ಎಚ್.ಡಿ.ರೇವಣ್ಣ ಕುಟುಂಬವನ್ನು ಹೇಗೆ ಕಟ್ಟಿಹಾಕಬೇಕು ಎಂದು ಶಿವರಾಮೇಗೌಡ ಹೇಳಿದ್ದರು. ಕಾಲ್ ರೆಕಾರ್ಡ್ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಇದು ದೊಡ್ಡ ಜಾಲ ಇದೆ ಅಂತ ಗೊತ್ತಾದ ಮೇಲೆ ಕಾಲ್ ರೆಕಾರ್ಡ್ ಮಾಡಿದೆ ಎಂದರು.

ಕಾರ್ತಿಕ್‍ನನ್ನು ಏಕೆ ಬಂಧಿಸಿಲ್ಲ: ‘ನಾನು ಪೆನ್‍ಡ್ರೈವ್ ಅನ್ನು ದೇವರಾಜೇಗೌಡ ಕೊಟ್ಟಿದ್ದೆ ಎಂದು ಹೇಳಿದ್ದ ಕಾರ್ತಿಕ್, 4ಜಿ.ಬಿ. ಮೆಮೊರಿ ಕಾರ್ಡ್ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಆ 4ಜಿ.ಬಿ. ಕಾರ್ಡನ್ನು ಎಸ್‍ಐಟಿಗೆ ಕೊಟ್ಟಿರುವುದಾಗಿ ಹೇಳಿದ್ದಾನೆ. ಅಂತಹ ಕಾರ್ತಿಕ್‍ನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸುತ್ತಿಲ್ಲ. ಇನ್ನು ನಿರೀಕ್ಷಣಾ ಜಾಮೀನು ವಜಾ ಆದ ತಕ್ಷಣ ರೇವಣ್ಣರನ್ನು ಬಂಧಿಸಿದ್ದೀರಿ. ಆದರೆ, ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದರೂ ಯಾಕೆ ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಬೇಕು’.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News