ಬೆಂಗಳೂರಿನಲ್ಲಿ 50 ಹೊಸ ಇಂದಿರಾ ಕ್ಯಾಂಟಿನ್‍ಗಳ ಸ್ಥಾಪನೆ
ಬೆಂಗಳೂರು: ಈ ಸಾಲಿನಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಿರ ಅಥವಾ ಮೊಬೈಲ್ ಮೋಡ್‍ನಲ್ಲಿ ಸ್ಥಾಪಿಸುವುದು. ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜನೆಯನ್ನು ಬಜೆಟ್‍ನಲ್ಲಿ ಉಲ್ಲೇಖಿಸಲಾಗಿದ್ದು, ಇದಕ್ಕಾಗಿ 70 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಉನ್ನತೀಕರಿಸಲು 2 ವರ್ಷಗಳಲ್ಲಿ ಸುಮಾರು 200 ಕೋಟಿ ರೂ.ಗಳ ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಸುಮಾರು 100 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯವನ್ನು ಸುಗಮಗೊಳಿಸಲು, ಬೆಂಗಳೂರು ಆರೋಗ್ಯ ಆಯುಕ್ತರು ಎನ್ನುವ ಹೊಸ ಹುದ್ದೆಯನ್ನು ಸೃಜಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಆರೋಗ್ಯ ವ್ಯವಸ್ಥೆಯನ್ನು ಅವರ ಆಡಳಿತಾತ್ಮಕ ಸುಪರ್ದಿಯಲ್ಲಿ ತರಲಾಗುತ್ತದೆ. ಇದಕ್ಕಾಗಿ ಈ ಸಾಲಿನಲ್ಲಿ 20 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.