ಬೆಂಗಳೂರು: ಸೋನಮ್ ವಾಂಗ್‍ಚುಕ್ ಬೆಂಬಲಿಸಿ ಉಪವಾಸ ಸತ್ಯಾಗ್ರಹ

Update: 2024-10-13 17:30 GMT

ಬೆಂಗಳೂರು: ಲಡಾಖ್‍ನ ಆರನೆ ಶೆಡ್ಯೂಲ್ ಮತ್ತು ಸೋನಮ್ ವಾಂಗ್‍ಚುಕ್ ಅವರ ಹೋರಾಟವನ್ನು ಬೆಂಬಲಿಸಿ ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಫ್ರೆಂಡ್ಸ್ ಆಫ್ ಲಡಾಕ್-ಬೆಂಗಳೂರು ತಂಡದ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗಿದೆ.

ಲಡಾಖ್‍ನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸ್ಥಳೀಯ ಜನರನ್ನು ಉಳಿಸುವ ಪ್ರಯತ್ನದಲ್ಲಿ ಪರಿಸರ ಹೋರಾಟಗಾರ ಸೋನಮ್ ವಾಂಗ್‍ಚುಕ್, ಲಡಾಖ್‍ಗೆ 6ನೇ ಶೆಡ್ಯೂಲ್ ಭರವಸೆಯನ್ನು ಭಾರತ ಸರಕಾರಕ್ಕೆ ನೆನಪಿಸಲು ಲಡಾಖ್‍ನಲ್ಲಿ ಮಾರ್ಚ್‍ನಲ್ಲಿ 21 ದಿನಗಳ ಹವಾಮಾನ ಉಪವಾಸ ಮಾಡಿದರು. ಭಾರತದಾದ್ಯಂತ ಸಾವಿರಾರು ಜನರು ಅವರೊಂದಿಗೆ ಸೇರಿಕೊಂಡು, ಲಡಾಖ್‍ನ್ನು ಉಳಿಸಲು ಬೆಂಬಲಿಸಿದ್ದು, ಬೆಂಗಳೂರಿನಲ್ಲಿಯೂ ಬೆಂಬಲಿಸಲು ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸತ್ಯಾಗ್ರಹನಿರತರು ತಿಳಿಸಿದರು.

ಸೆಪ್ಟಂಬರ್ ನಲ್ಲಿ ಸೋನಮ್ ವಾಂಗ್‍ಚುಕ್ ಮತ್ತು ಅವರ ತಂಡವು ಲಡಾಖ್ ನಿಂದ ದೆಹಲಿಗೆ ಸಾವಿರ ಕಿಮೀ ನಡೆದುಕೊಂಡು, 6ನೇ ಶೆಡ್ಯೂಲ್‍ನಲ್ಲಿ ತಮ್ಮ ಬೇಡಿಕೆಯನ್ನು ನೇರವಾಗಿ ಸರಕಾರಕ್ಕೆ ತಲುಪಿಸುವ ಆಶಯವನ್ನು ಹೊಂದಿತ್ತು. ಆದರೆ ಅವರು ನಿರಾಶೆಗೊಂಡರು. ಸೋನಮ್ ವಾಂಗ್‍ಚುಕ್ ಮತ್ತು ಅವರ ತಂಡವು ದಿಲ್ಲಿಯ ಲಡಾಖ್ ಭವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು, ಸರಕಾರವು ಅವರ ಮನವಿಯನ್ನು ಆಲಿಸುವವರೆಗೆ ನಡೆಸುತ್ತಿದೆ ಎಂದು ಸತ್ಯಾಗ್ರಹ ನಿರತರು ಹೇಳಿದರು.

ಲಡಾಖ್‍ಗೆ 6ನೇ ಶೆಡ್ಯೂಲ್ ಸ್ಥಾನಮಾನವು ಸ್ಥಳೀಯ ಜನರನ್ನು ಅಭಿವೃದ್ಧಿ ಮತ್ತು ಅವಕಾಶ, ಸಬಲೀಕರಣಗೊಳಿಸುವುದರ ಜೊತೆಗೆ ಪ್ರಕೃತಿಯ ಸಂರಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದರು.

ಸರಕಾರಿ ಸಂಸ್ಥೆಗಳಲ್ಲಿ ಅಧಿಕಾರ ಮತ್ತು ಪ್ರಾತಿನಿಧ್ಯದ ಕೊರತೆಯಿಂದಾಗಿ ಲಡಾಕ್ ಜನರು ಪ್ರಗತಿ ಸಾಧಿಸಲು ಲು ಸಾಧ್ಯವಾಗುತ್ತಿಲ್ಲ. ಲಡಾಖ್ ಸಮಸ್ಯೆಯು ಪ್ರತಿಯೊಬ್ಬರ ಸಮಸ್ಯೆಯಾಗಿದೆ. ವಿಶೇಷವಾಗಿ ಹವಾಮಾನ ಬಿಕ್ಕಟ್ಟಿಗೆ ಹೇಗೆ ಕಾರಣ ಎಂಬುದನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರರಾದ ಜಾರ್ಜ್ ಜೋಶೆಫ್, ನಮ್ರತಾ, ವಕೀಲ ಕೆ.ಎಸ್.ಅನಿಲ್, ಅಕ್ಷಿತಾ, ಚಂದನ್.ಕೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News