ಐಪಿಎಲ್ ಪಂದ್ಯಾವಳಿ: ಮೆಟ್ರೋ ಸೇವಾವಧಿ ವಿಸ್ತರಣೆ

Update: 2024-03-22 13:46 GMT

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.25, 29 ಹಾಗೂ ಎ.2ರಂದು ಐಪಿಎಲ್ ಪಂದ್ಯಾವಳಿ ನಡೆಯಲಿದ್ದು, ಈ ಮೂರು ದಿನಗಳ ಕಾಲ ಮೆಟ್ರೋ ರೈಲು ಸೇವೆ ರಾತ್ರಿ 11.30ರ ವರೆಗೆ ವಿಸ್ತರಣೆಯಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಈ ದಿನಗಳಂದು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೇಟ್‍ಗಳು 50 ರೂ.ಗೆ ಲಭ್ಯವಿರುತ್ತದೆ. ಈ ಟಿಕೆಟ್‍ಗಳು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ರಾತ್ರಿ 8 ಗಂಟೆಯಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಟಿಕೆಟ್‍ಗಳೂ ಲಭ್ಯವಿರುತ್ತದೆ ಎಂದು ಹೇಳಿದೆ.

ಬೆಳಗ್ಗೆ 4.30ಕ್ಕೆ ಮೆಟ್ರೋ ಸೇವೆ ಆರಂಭ: ಇನ್ನು ಮಾ.24ರಂದು ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಡದಿ ಹಾಫ್ ಮ್ಯಾರಥಾನ್‍ನಲ್ಲಿ ನಡೆಯಲಿದೆ. ಓಟದ ಅನುಕೂಲಕ್ಕಾಗಿ ಮೆಟ್ರೋದ ನಾಲ್ಕು ಟರ್ಮಿನಲ್ ಹಾಗೂ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಯ ಬದಲಾಗಿ ಬೆಳಗ್ಗೆ 4.30ಕ್ಕೆ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಮಾಹಿತಿ ನಮ್ಮ ಮೆಟ್ರೋ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News