ಮಹಾರಾಷ್ಟ್ರದಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಪ್ರಚಾರ

Update: 2024-05-17 16:45 GMT

ಮುಂಬೈ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪ್ರವಾಸದಲ್ಲಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಶುಕ್ರವಾರ ಮುಂಬೈ ನಾರ್ಥ್ ಸೆಂಟ್ರಲ್ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಏಕನಾಥ್ ಗಾಯಕ್ವಾಡ್ ಜತೆಗೂಡಿ ಅಂಧೇರಿ ಈಸ್ಟ್, ಸಹಾರ್ ಗಾವ್, ಮರೋಲ್ ಪೈಪ್ ಲೈನ್, ಚಕಾಲಾ, ಜೆ.ಬಿ.ನಗರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಝಮೀರ್ ಅಹ್ಮದ್ ಖಾನ್, ದೇಶದಲ್ಲಿ ಬದಲಾವಣೆ ಸಮಯ ಬಂದಿದೆ. ಹತ್ತು ವರ್ಷಗಳ ನರೇಂದ್ರ ಮೋದಿ ಸರಕಾರದ ವಿರುದ್ಧ ಜನ ಆಕ್ರೋಶ ಗೊಂಡಿದ್ದಾರೆ. ದೇಶ ಹಾಗೂ ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಮೈತಿಕೂಟ ಇಂಡಿಯಾ ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

ಮುಂಬೈ ನಾರ್ಥ್ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್-ಎನ್‍ಸಿಪಿ-ಶಿವಸೇನೆ-ಆಮ್ ಆದ್ಮಿ ಪಾರ್ಟಿ ಮಹಾಮೈತ್ರಿಕೂಟದ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ಜನಪರ ಕಾಳಜಿವುಳ್ಳ ವಿದ್ಯಾವಂತೆ. ಉತ್ತಮ ಹಿನ್ನೆಲೆ ಹೊಂದಿರುವ ವರ್ಷಾ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಝಮೀರ್ ಅಹ್ಮದ್ ಖಾನ್, ವರ್ಷಾ ಗಾಯಕ್ವಾಡ್ ಜತೆಗೂಡಿ ಅಂಧೇರಿಯ ಶಿವಸೇನೆ ಕಚೇರಿಗೂ ಭೇಟಿ ನೀಡಿದರು. ಈ ವೇಳೆ ಪಾಲಿಕೆ ಸದಸ್ಯೆ ವಿನ್ನಿ ಡಿ’ಸೋಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News