ಅನಧಿಕೃತ ಶಾಲೆಗಳ ಮೇಲೆ ನಿರ್ಧಾಕ್ಷಣ ಕ್ರಮ ಜರುಗಿಸಿ : ‘ರುಪ್ಸ ಕರ್ನಾಟಕ’
ಬೆಂಗಳೂರು : ಐಸಿಎಸ್‍ಸಿ, ಸಿಬಿಎಸ್‍ಇ ಹಾಗೂ ಇತರೆ ಪಠ್ಯಕ್ರಮವನ್ನು ಬೋಧಿಸುವುದಾಗಿ ಪೋಷಕರಿಗೆ ತಿಳಿಸಿ, ಸರಕಾರದಿಂದ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಮೋಸ ಮಾಡುತ್ತಿರುವ ಅನಧಿಕೃತ ಶಾಲೆಗಳ ಮೇಲೆ ನಿರ್ಧಾಕ್ಷಣ ಕ್ರಮ ಜರುಗಿಸಬೇಕು ಎಂದು ರುಪ್ಸ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಬೆಂಗಳೂರಿನಂತಹ ನಗರದಲ್ಲಿ ನೂರಾರು ಶಾಲೆಗಳು ಐಸಿಎಸ್‍ಸಿ, ಸಿಬಿಎಸ್‍ಸಿ ಹಾಗೂ ಇತರೆ ಪಠ್ಯಕ್ರಮ ಎಂದು ಪೋಷಕರನ್ನು ವಂಚಿಸುತ್ತಿರುವ ಶಾಲೆಗಳ ಮೇಲೆ ಖಾನೂನು ಕ್ರಮ ಜರುಗಿಸುತ್ತಿಲ್ಲ. ಎರಡು ವರ್ಷಗಳಿಂದ ಅನಧಿಕೃತ ಶಾಲೆಗಳು ಎಂದು ಹೇಳಿಕೆ ನೀಡಲಾಗುತ್ತಿದ್ದರೂ, ಯಾವ ಶಾಲೆಗಳ ಮೇಲೆಯೂ ಕ್ರಮ ಜರುಗಿಸಿಲ್ಲ ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನೂ ಪ್ರಕಟಿಸಿಲ್ಲ ಎಂದಿದ್ದಾರೆ.
ಶಿಕ್ಷಣ ಇಲಾಖಾ ಅಧಿಕಾರಿಗಳ ಭ್ರಷ್ಟಾಚಾರದಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಆದುದರಿಂದ ತಕ್ಷಣ ಇಂತಹ ಶಾಲೆಗಳ ಮೇಲೆ ನಿರ್ಧಾಕ್ಷಿಣವಾಗಿ ಕ್ರಮ ಜರುಗಿಸಬೇಕು. ಆ ಶಾಲೆಗಳು ನಡೆಯಲು ಸಹಕರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆಯೂ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.