ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ನಿಂದ ಪೌರ ಕಾರ್ಮಿಕರಿಗಾಗಿ ಸೀರತ್ ಸಮಾವೇಶ

Update: 2024-09-16 07:58 GMT

ಬೆಂಗಳೂರು: 'ಹುಟ್ಟಿನ ಆಧಾರದಲ್ಲಿ ಯಾರು ಶ್ರೇಷ್ಠರಲ್ಲ ಮತ್ತು ಯಾರು ಕನಿಷ್ಠರಲ್ಲ ಬದಲಾಗಿ ಮನುಷ್ಯನ ಕರ್ಮಗಳೇ ಶ್ರೇಷ್ಠತೆಯ ಮಾನದಂಡವಾಗಿದೆ' ಎಂದು ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಇದರ ಜತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್, ಮೈಸೂರು ರೋಡ್ ವತಿಯಿಂದ ಪೌರ ಕಾರ್ಮಿಕರಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಸೀರತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

'ಪ್ರವಾದಿ ಮುಹಮ್ಮದ್ (ಸ.) ಮನುಷ್ಯರೆಲ್ಲರೂ ಸಮಾನರು ಹಾಗೂ ಪರಸ್ಪರ ಎಲ್ಲ ಮನುಷ್ಯರೊಂದಿಗೆ ಪ್ರೀತಿ ಸಹ ಬಾಳ್ವೆಯಿಂದ ಬದುಕಬೇಕು ಎಂಬ ಚಿಂತನೆಯನ್ನು ಕಲಿಸಿದರು, ಆದರೆ ಇಂದು ಜಗತ್ತು ಮನುಷ್ಯರನ್ನು ಜಾತಿ, ಧರ್ಮ, ಕುಲ ಗೋತ್ರದ ಆಧಾರದಲ್ಲಿ ವಿಂಗಡಿಸುತ್ತಿರುವುದು ನಿಜಕ್ಕೂ ಬಹಳ ದೊಡ್ಡ ದುರಂತ ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ನಗರ ಉಪ ಸಂಚಾಲಕ ಡಾ.ಸಯ್ಯದ್ ಫಕ್ರುದ್ದೀನ್ ಖಾಝಿ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಜ.ಇ. ಹಿಂದ್ ಸ್ಥಾನೀಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಗುಡಿಹಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News