ಐದು ವರ್ಷ ಸಿಎಂ ಆಗಿರುತ್ತೇನೆ ಅಂತ ಹೇಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯ ಇಲ್ಲ: ಬಿ.ವೈ. ವಿಜಯೇಂದ್ರ

Update: 2024-11-05 09:05 GMT

ಬೆಂಗಳೂರು:  ಸಿಎಂಗೆ ಲೋಕಾಯುಕ್ತ ನೋಟೀಸ್ ಕೊಟ್ಟು ವಿಚಾರಣೆಗೆ ಬರಲು ತಿಳಿಸಿದ್ದಾರೆ. ಸಿಎಂ ಆಗಿ ವಿಚಾರಣೆಗೆ ಹೋಗುತ್ತೀರೋ, ಆರೋಪಿಯಾಗಿ ಹೋಗುತ್ತೀರೋ ಎಂದು ಸಿಎಂ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಎಂಬ ಒಬ್ಬ ಬೇಜವಾಬ್ದಾರಿ ಮಂತ್ರಿಯ ನೇತೃತ್ವದಲ್ಲಿ ಮಠ ಮಾನ್ಯ, ರೈತರ ಜಮೀನು ಹೊಡೆಯುವ ಯತ್ನ  ನಡೆಯುತ್ತಿದೆ. ಇದಕ್ಕೆ ಸಿಎಂ ಕುಮ್ಮಕ್ಕು ಕೂಡಾ ಇದೆ ಎಂದು ಆರೋಪಿಸಿದರು.

ಸಿಎಂ ಕುಟುಂಬವೇ ಇಂದು ಆರೋಪಿ ಸ್ಥಾನದಲ್ಲಿ ನಿಂತಿದೆ. ಯಾವಾಗಲೋ ರಾಜೀನಾಮೆ ಕೊಡಬೇಕಿತ್ತು. ಐದು ವರ್ಷ ಸಿಎಂ ಆಗಿರುತ್ತೇನೆ ಅಂತಾ ಸಿದ್ದರಾಮಯ್ಯ ರಾಜ್ಯದ ಜನತೆಗೆ ಹೇಳಲಿ ನೋಡೋಣ. ಹೇಳಲು ಅವರಿಗೆ ಸಾಧ್ಯವೇ ಇಲ್ಲ. ಅವರು ರಾಜೀನಾಮೆ ಕೊಡುವುದು ಸಿದ್ಧ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಎಲ್ಲರೂ ಮಾತುಕತೆ ಮಾಡಿ ರಾಜೀನಾಮೆಗೆ ಮುಹೂರ್ತ ಸಿದ್ದ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

 Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News