ಬೆಂಗಳೂರು | ಮಾಜಿ ಮುಖ್ಯಮಂತ್ರಿ ಎಸ್.​​ಎಂ.ಕೃಷ್ಣ​ ಆಸ್ಪತ್ರೆಗೆ ದಾಖಲು

Update: 2024-10-19 12:22 GMT

ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.​​ಎಂ.ಕೃಷ್ಣ ಅವರು ಇಂದು(ಶನಿವಾರ) ವಯೋಸಹಜ ಕಾಯಿಲೆಯಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಣಿಪಾಲ್ ಆಸ್ಪತ್ರೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಎಸ್​ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದರು.

92 ವರ್ಷದ ಎಸ್.​​ಎಂ.ಕೃಷ್ಣ ಅವರಿಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಸತ್ಯನಾರಾಯಣ ಹಾಗೂ ಸನಿಲ್​ ಕಾರಂತ್​ ನೇತೃತ್ವದಲ್ಲಿ ಎಸ್.​​ಎಂ.ಕೃಷ್ಣ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News