ಎಸ್.ಎಂ. ಕೃಷ್ಣ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಡಾ. ಆರತಿ ಕೃಷ್ಣ ಸಂತಾಪ
ಬೆಂಗಳೂರು: ಈ ನಾಡು ಕಂಡ ಸವಿನಯ, ಸಜ್ಜನ ರಾಜಕಾರಣಗಳಲ್ಲಿ ಒಬ್ಬರಾದ ಎಸ್.ಎಂ. ಕೃಷ್ಣ ಅವರ ನಿಧನದ ವಿಚಾರ ಇಡೀ ದೇಶಕ್ಕೆ ತುಂಬಲಾರದ ನಷ್ಟವೆಂದರೆ ತಪ್ಪಾಗಲಾರದು. ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿನ ಬೆಳವಣಿಗೆಗೆ ಇವರ ಪಾತ್ರ ಮತ್ತು ಕೊಡುಗೆ ಮಹತ್ವದ್ದಾಗಿದೆ. ನಾಡಿನ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ಇವರ ಸೇವೆ ಸ್ಮರಣೀಯ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ. ಕೃಷ್ಣ ಅವರು ನನ್ನ ತಂದೆ ಬೇಗಾನೆ ರಾಮಯ್ಯ (ಮಾಜಿ ಸಚಿವರು) ಅವರ ಸಮಕಾಲೀನರು ಮತ್ತು ನಮ್ಮ ಕುಟುಂಬದ ಆತ್ಮೀಯರೂ ಆಗಿದ್ದು, ನಾನು ಈ ಹಿಂದೆ ಅಮೇರಿಕಾ ರಾಯಭಾರಿ ಕಚೇರಿ ಮತ್ತು ಕೇಂದ್ರ ಸಾಗರೋತ್ತರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಎಸ್.ಎಂ ಕೃಷ್ಣರೊಂದಿಗಿನ ಒಡನಾಟ, ಅವರ ದೂರದೃಷ್ಟಿಯ ನಾಯಕತ್ವ, ಘನತೆಯ ರಾಜಕಾರಣ, ಸರಳ ಸವಿನಯ ನಡವಳಿಕೆ ಸ್ಪೂರ್ತಿದಾಯಕವಾಗಿತ್ತು. ಎಸ್.ಎಂ ಕೃಷ್ಣ ಅವರ ನಾಯಕತ್ವ, ರಾಜಕಾರಣ ಪಕ್ಷಾತೀತವಾಗಿ ಶ್ಲಾಘನೀಯವೇ ಸರಿ. ಅವರ ಅಗಲಿಕೆಯಿಂದ ದುಃಖಿತವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲು ಆ ಪರಮಾತ್ಮನಲ್ಲಿ ಕೋರುತ್ತೇನೆ ಎಂದು ಡಾ. ಆರತಿ ಕೃಷ್ಣ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.