ಎಸೆಸೆಲ್ಸಿ ಮರುಮೌಲ್ಯ ಮಾಪನದಲ್ಲಿ 625 ಅಂಕ ಪಡೆದ ಭಾವನಾ

Update: 2024-06-05 12:38 GMT

ಭಾವನಾ

ಬೆಂಗಳೂರು : 2023-24ನೆ ಸಾಲಿನ ಎಸೆಸೆಲ್ಸಿ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಟಿ.ದಾಸರಹಳ್ಳಿ ಬಿಎನ್‍ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಭಾವನಾ 625 ಅಂಕಗಳನ್ನು ಪಡೆದಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಹಿಂದೆ ಪ್ರಕಟಿಸಿದ್ದ ಫಲಿತಾಂಶದಲ್ಲಿ ಭಾವನಾ 620 ಅಂಕ ಪಡೆದಿದ್ದರು. ಆದರೆ ಮರುಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

ಈ ಹಿಂದೆ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ 625 ಅಂಕಗಳನ್ನು ಪಡೆದಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಈಗ ಮತ್ತೊರ್ವ ವಿದ್ಯಾರ್ಥಿನಿ 625 ಅಂಕಗಳನ್ನು ಪಡೆದಿದ್ದಾರೆ.

ಮೈಸೂರಿನ ವಿದ್ಯಾರ್ಥಿನಿಗೆ 624 ಅಂಕ: ಇನ್ನು ಮರು ಮೌಲ್ಯಮಾಪನದಲ್ಲಿ ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ಮೊದಲ ಫಲಿತಾಂಶದಲ್ಲಿ 620 ಅಂಕ ಪಡೆಕೊಂಡಿದ್ದರು. ಮರು ಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News