ಹನಿಟ್ರ್ಯಾಪ್ ಕೆಟ್ಟ ಸಂಸ್ಕೃತಿ: ಯತ್ನಾಳ್ ಆಕ್ರೋಶ

Update: 2025-03-20 21:08 IST
ಹನಿಟ್ರ್ಯಾಪ್ ಕೆಟ್ಟ ಸಂಸ್ಕೃತಿ: ಯತ್ನಾಳ್ ಆಕ್ರೋಶ
  • whatsapp icon

ಬೆಂಗಳೂರು : ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ, ಜನಪ್ರತಿನಿಧಿಗಳನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸಂಸ್ಕೃತಿ, ಒಳ್ಳೆಯದಕ್ಕೆ ಹೆಸರುವಾಸಿಯಾಗಿದ್ದು, ತಾವು ಸಿಎಂ ಆಗಬೇಕು ಎಂದು, ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಹನಿಟ್ರ್ಯಾಪ್‍ಗೆ ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‍ಗೆ ತಿರುಗೇಟು ಕೊಟ್ಟರು.

ಸರಕಾರ ಇಂತಹ ನೀಚ ಬೆಳವಣಿಗೆಗೆ ಕೂಡಲೇ ಕಡಿವಾಣ ಹಾಕಬೇಕು. ಸೂಕ್ತವಾದ ತನಿಖೆ ನಡೆಸಿ ಜನಪ್ರತಿನಿಧಿಗಳನ್ನು ರಕ್ಷಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News