ಕಲಾಪದಲ್ಲಿ ಹೆಚ್ಚು ಸಮಯವಿದ್ದರೆ ಉತ್ತಮ ರಾಜಕಾರಣಿಯಾಗಲು ಸಾಧ್ಯ : ಸ್ಪೀಕರ್ ಯು.ಟಿ.ಖಾದರ್

Update: 2024-12-13 14:10 GMT

ಸ್ಪೀಕರ್ ಯು.ಟಿ.ಖಾದರ್

ಬೆಳಗಾವಿ : ‘ಸದನ ಕಲಾಪದಲ್ಲಿ ಹೆಚ್ಚು ಸಮಯ ಇದ್ದವರು ಹೆಚ್ಚು ಬಾರಿ ಗೆಲುವು ಸಾಧಿಸುವುದಲ್ಲದೆ, ಹಾಗೂ ಉತ್ತಮ ರಾಜಕಾರಣಿಯಾಗಲು ಸಹಕಾರಿ’ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ಶುಕ್ರವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿನ್ನೆ(ಡಿ.12) ಸಕಾಲಕ್ಕೆ ಆಗಮಿಸಿದ ಶಾಸಕರು ಹಾಗೂ ರಾತ್ರಿ 10 ಗಂಟೆಯ ವರೆಗೂ ಕಲಾಪದಲ್ಲಿ ಹಾಜರಿದ್ದ ಸದಸ್ಯರು, ಸಚಿವರ ಹೆಸರುಗಳನ್ನು ವಾಚಿಸಿದರು. ಸದನದಲ್ಲಿ ಗಮನಸೆಳೆಯುವ ಸೂಚನೆ ಮುಗಿದ ಕೂಡಲೇ ಶಾಸಕರು ಹೊರಹೋಗುವುದು ಸರಿಯಲ್ಲ. ಸದನದಲ್ಲಿ ಹೆಚ್ಚು ಕಾಲ ಇದ್ದು ಕಾರ್ಯಕಲಾಪಗಳಲ್ಲಿ ಭಾಗಿಯಾದರೆ ಅನುಭವವೂ ಹೆಚ್ಚಾಗಲಿದೆ, ದೊಡ್ಡ ಸ್ಥಾನವೂ ಸಿಗಲಿದೆ ಎಂದು ಸಲಹೆ ನೀಡಿದರು.

ವೈದ್ಯರಿಗೆ ವೈದ್ಯಕೀಯ ಕಾಲೇಜು, ವಕೀಲರಿಗೆ ಕಾನೂನು ಕಾಲೇಜುಗಳಿವೆ. ವೃತ್ತಿಪರರಿಗೆ ಆಯಾ ಸಂಸ್ಥೆಗಳಲ್ಲಿ ತರಬೇತಿ ಸಿಗುತ್ತದೆ. ಆದರೆ ರಾಜಕಾರಣಿಗಳಿಗೆ ತರಬೇತಿ ನೀಡುವ ಸಂಸ್ಥೆಗಳಿಲ್ಲ. ಹೀಗಾಗಿ ಸದನವೇ ಒಂದು ಅಕಾಡೆಮಿ ಇದ್ದಂತೆ. ಇಲ್ಲಿ ಹೆಚ್ಚು ಕಾಲ ಕಲಾಪಗಳಲ್ಲಿ ಭಾಗಿಯಾದರೆ, ಹಿರಿಯರು ಹೇಳಿದ ಮಾತುಗಳನ್ನು ಕೇಳಿದರೆ ಉತ್ತಮ ರಾಜಕಾರಣಿಯಾಗಬಹುದು. ಹಿರಿಯ ಶಾಸಕರ ಮಾತುಗಳೇ ಪಾಠಗಳಾಗಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News