ಬೀದರ್ | ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಯಿರಿ : ಫರ್ನಾಂಡಿಸ್ ಹಿಪ್ಪಳಗಾಂವ್

Update: 2025-04-03 15:15 IST
Photo of Press meet
  • whatsapp icon

ಬೀದರ್ : ಯಾರೇ ಒತ್ತಾಯಿಸಿದರು ಕೂಡ ಅವರ ಮಾತಿಗೆ ಕಿವಿಗೊಡದೆ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಉಪಜಾತಿ ಕಾಲಂ ನಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಿ ಎಂದು ಮಾದಿಗ ಸಮನ್ವಯ ಸಮಿತಿಯ ಪ್ರಮುಖ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.

ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮ ಎಂದರೆ ನಮ್ಮ ಅಂಗಿ ಇದ್ದಂತೆ, ಜಾತಿ ಎಂದರೆ ಚರ್ಮ ಇದ್ದಂತೆ. ಧರ್ಮ ಹಾಗೂ ಜಾತಿ ನಮಗೆ ಕಡ್ಡಾಯವಾಗಿಬೇಕು. ನಾವು ಮೂಲತಃ ಹಿಂದೂಗಳೇ ಹೊರತು ಕ್ರಿಶ್ಚಿಯನ್ ರಲ್ಲ ಇದನ್ನು ಈ ಜಿಲ್ಲೆಯ ಪ್ರತಿಯೊಬ್ಬ ನಮ್ಮ ಸಮಾಜದವರು ಅರ್ಥಮಾಡಿಕೊಳ್ಳಬೇಕು ಎಂದರು.

ನಮ್ಮ ಜಿಲ್ಲೆಯ ಔರದ್, ಕಮಲನಗರ, ಭಾಲ್ಕಿ, ಹುಲಸೂರ್ ಹಾಗೂ ಬಸವಕಲ್ಯಾಣ ತಾಲೂಕುಗಳಿಗೆ ಮಹಾರಾಷ್ಟ್ರ ರಾಜ್ಯದ ಪ್ರಭಾವ ಇರುವ ಕಾರಣ ಅಲ್ಲಿಯ ನಮ್ಮ ಸಮಾಜದವರು ಹೆಚ್ಚಾಗಿ ಮರಾಠಿ ಮಾತಾಡುತ್ತಾರೆ. ಅಲ್ಲಿ ನಮ್ಮ ಸಮಾಜದವರು ಮಾಂಗ್ ಎಂದು ಕರೆಯಿಸಿಕೊಳ್ಳುತ್ತಾರೆ. ಆದರೆ, ಈ ತಿಂಗಳ 6 ರಿಂದ ಒಂದು ವಾರದ ಮಟ್ಟಿಗೆ ತಮ್ಮ ಮನೆಗಳಿಗೆ ಜಾತಿ ಜನಗಣತಿ ಅಧಿಕಾರಿಗಳು ಬಂದರೆ ಐದು ಪುಟದ ದಾಖಲೆಗಳಿರುವ ಜಾತಿ ಜನಗಣತಿ ವರದಿಯು ಸಂಪೂರ್ಣವಾಗಿ ಬರೆದು ಅದರಲ್ಲಿ ಕಡ್ಡಾಯವಾಗಿ ಉಪಜಾತಿ ಕಾಲಂ ನಲ್ಲಿ ಮಾದಿಗ ಎಂದು ಬರೆಯಿಸಬೇಕು ಎಂದು ಹೇಳಿದರು.

35 ವರ್ಷಗಳಿಂದ ನಿರಂತರವಾಗಿ ನಾವು ಹೋರಾಟ ಮಾಡಿದ ಪ್ರತಿಫಲವಾಗಿ ಈಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನ ಆದೇಶದಂತೆ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಜಾತಿ ಜನಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದರು.

ಸ್ವಾಮಿದಾಸ್ ಕೆಂಪೇನೊರ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಾದಿಗ ಸಮನ್ವಯ ಸಮಿತಿಯ ರಮೇಶ್ ಕಟ್ಟಿತುಗಾಂವ್, ಸುಧಾಕರ್ ಸೂರ್ಯವಂಶಿ, ವಿಜಯಕುಮಾರ್ ಹಿಪ್ಪಳಗಾಂವ್, ಪೀಟರ್ ಶ್ರೀಮಂಡಲ್, ರವಿ ನಿಜಾಂಪುರ್, ಶಿವರಾಜ್, ದತ್ತಾತ್ರಿ ಜ್ಯೋತಿ, ಕಮಲಾಕರ್ ಹೆಗಡೆ, ಗೋರಖ ನಿಂಬೂರ್, ದಯಾನಂದ, ಪ್ರದೀಪ್ ಹೆಗಡೆ ಹಾಗೂ ರಾಹುಲ್ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News