ಬೀದರ್ | ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ ಅರೆಬೆತ್ತಲೆ ಪ್ರತಿಭಟನೆ

Update: 2024-11-06 13:40 GMT

ಬೀದರ್ : ಸಂವಿಧಾನಿಕ ಸಂಸ್ಥೆಗಳಾದ ಈಡಿ, ಐಟಿ, ಸಿಬಿಐ ಹಾಗೂ ರಾಜಭವನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಅಪರಾಧಗಳ ತನಿಖೆ ಸಂಸ್ಥೆಗಳಿಗಾಗಿಯೇ ಉಳಿಯಬೇಕು ಹಾಗೂ ರಾಜಕೀಯ ಸಂಚಿಗೆ ಸಿದ್ದರಾಮಯ್ಯನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ಜಾಗೃತ ವಾಗಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸಂಘಟನೆ ವತಿಯಿಂದ ಅರೆಬೆತ್ತಲೆ ಮೆರವಣಿಗೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ದೇಶದ ಅಖಂಡತೆಗೆ ದಕ್ಕೆ ತಂದೊಡ್ಡಲು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ಮತ್ತು ರಾಜಭವನದ ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ರಾಜಕೀಯ ಭ್ರಷ್ಟಾಚಾರ ಸ್ವಜನ ಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಗಳಿಗೆ ಪೂರ್ಣವಿರಾಮ ಹಾಕುವುದಾಗಿ ಹೇಳಿ ಜನರ ವಿಶ್ವಾಸಗಳಿಸಿ ಅಧಿಕಾರ ಪಡೆದ ಪಕ್ಷ ಏನು ಮಾಡಿದೆ? . ಭ್ರಷ್ಟಾಚಾರದ ಹಗರಣಗಳ ರೂವಾರಿಗಳಾಗಿದ್ದ ಹಲವು ರಾಜಕೀಯ ನಾಯಕರನ್ನು ರಾಜಕೀಯ ಶುದ್ದೀಕರಣ ಮಾಡಿ ಯಾವ ರೀತಿಯಲ್ಲಿ ತಮ್ಮೊಳಗೆ ಸೇರಿಸಿಕೊಳ್ಳಲಾಯಿತು? ಝಾರ್ಖಂಡ್ ಮತ್ತು ದಿಲ್ಲಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಹೇಗೆಲ್ಲ ನಡೆಸಿಕೊಳ್ಳಲಾಯಿತು? ಯಾವೆಲ್ಲ ರೀತಿಯಲ್ಲಿ ಜನರು ಆರಿಸಿದ ಸರಕಾರಗಳನ್ನು ಅಧಿಕಾರ ನಡೆಸಲು ಬಿಡದೆ ಅಲ್ಲಿ ತೊಡರುಗಾಲು ಹಾಕಲಾಯಿತು? ಇವೆಲ್ಲವೂ ನಮ್ಮ ಕಣ್ಣೆದುರೇ ಇದೆ ಎಂದರು.

ಈ ಸಂದರ್ಭದಲ್ಲಿ ಮೇಶ ಬೆಲ್ದಾರ, ವಾಮನ ಮೈಸಲಾಗೆ, ಶಿವರಾಜ ತಡಪಲ್ಲಿ, ಸತೀಶ್ ರತ್ನಾಕರ್, ಝರೆಪ್ಪ ವರ್ಮಾ, ಶಿರೋಮಣಿ ಹಲಗೆ, ಬಸವರಾಜ ಭಾವಿದೊಡ್ಡಿ ಡಿ, ರಾಹುಲ್, ಬಸವರಾಜ ಭಾವಿದೊಡ್ಡಿ ಡಿ, ಶಿವಕುಮಾರ್ ಗುನ್ನಳ್ಳಿ, ರಾಹುಲ್ ಹಾಲಹಿಪ್ಪರಗಾ, ವಿಜಯಕುಮಾರ ಭಾವಿಕಟ್ಟಿ, ಶಿವಕುಮಾರ್ ಗುನ್ನಳ್ಳಿ, ಗೌತಮ ಮುತ್ತಂಗಿಕರ, ಜೈಭೀಮ ಚಿಮ್ಮನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News