ಬೀದರ್: ಲಂಚ ಸ್ವೀಕರಿಸುತ್ತಿರುವಾಗ ಭೂದಾಖಲೆ ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ
ಬೀದರ್ : ಔರಾದ್ ತಾಲೂಕಿನ ಭೂದಾಖಲೆ ಸಹಾಯಕ ನಿರ್ದೇಶಕ ಸಂತೋಷ್ ಬೊಗಾರ್ ಅವರು ಲಂಚ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿರುವ ಬಗ್ಗೆ ವರದಿಐಗಿದೆ
ವಡಗಾಂವ್ (ಡಿ) ಗ್ರಾಮದ ನಿವಾಸಿಯಾದ ಮುಹಮ್ಮದ್ ಶೌಕತ್ ಅಲಿ ಅವರು ತಮ್ಮ ಹೆಸರಿನಲ್ಲಿದ್ದ ಒಟ್ಟು 20 ಗುಂಟೆ ಜಮೀನಿನಲ್ಲಿ ಈಗಾಗಲೇ 10 ಗುಂಟೆ ಜಮೀನಿನ ಸರ್ವೇ ಮಾಡಲಾಗಿದ್ದು, ಬಾಕಿ ಉಳಿದ 10 ಗುಂಟೆ ಜಮೀನಿನ ಸರ್ವೇ ಕುರಿತು ತಾಲೂಕಿನ ಎ.ಡಿ.ಎಲ್.ಆರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಜಮೀನಿನ ಸರ್ವೆ ಮಾಡುವ ಕುರಿತು ತಾಲೂಕು ಭೂದಾಖಲೆಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂಮಾಪಕ ಸಂತೋಷ್ ಬೊಗಾರ್ ಅವರಿಗೆ ಭೇಟಿಯಾಗಿ ಸರ್ವೇ ಮಾಡಲು ವಿನಂತಿಸಲಾಗಿತ್ತು. ಅವರು ಸರ್ವೇ ಮಾಡಲು 1 ಲಕ್ಷ 80 ಸಾವಿರ ರೂ. ಲಂಚದ ರೂಪದಲ್ಲಿ ಬೇಡಿಕೆ ಇಟ್ಟಿದ್ದರು. ಕೊನೆಗೆ 1 ಲಕ್ಷ 50 ಸಾವಿರಕ್ಕೆ ಒಪ್ಪಿದ್ದರು ಎಂದು ತಿಳಿದು ಬಂದಿದೆ.
ದಿ. 19 ರಂದು 75 ಸಾವಿರ ರೂ. ನೀಡುವಂತೆ ಹೇಳಿದ್ದರು. ಪಟ್ಟಣದ ದತ್ತ ಮಂದಿರ ಹತ್ತಿರ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿರುವಾಗ ಬೀದರ್ ಲೋಕಾಯುಕ್ತರ ಬಲಗೆ ಬಿದ್ದಿದ್ದಾರೆ.
ಕಾರ್ಯಾಚರಣೆಯಲ್ಲಿ ಬೀದರ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.