ಬೀದರ್ | ಭಾಲ್ಕಿಯಲ್ಲಿ ಭೀಮಾ ಕೊರೆಗಾಂವ್ ವಿಜಯೋತ್ಸವ ವಿಜೃಂಭಣೆಯಿಂದ ಆಚರಣೆ
ಬೀದರ್ : ಭಾಲ್ಕಿ ಪಟ್ಟಣದಲ್ಲಿ 207ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ದಿನಾಚರಣೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ನಗರದ ಅಶೋಕ್ ನಗರದಲ್ಲಿ ಪುರಸಭೆಯ ಅಧ್ಯಕ್ಷೆ ಶಶಿಕಲಾ ಸಿಂಗಾಕೆರೆ ಕೇಕ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಭೀಮಾ ಕೊರೆಗಾಂವ್ ಕದನವು ಶೌರ್ಯದ ಕದನವಾಗಿತ್ತು. ದಲಿತರು ಅವಮಾನ, ಜಾತೀಯತೆಯನ್ನು ಸಹಿಸದೆ ಬ್ರಿಟಿಷರ ಜತೆಗೂಡಿ ಪೆಶ್ವೇಗಳ ವಿರುದ್ಧ ಹೋರಾಡಿ ಗೆದ್ದಿದ್ದರು. ಕೇವಲ 500 ಮಹಾರ್ ಸೈನಿಕರು 30 ಸಾವಿರ ಪೆಶ್ವೇಗಳನ್ನು ಸೋಲಿಸಿದರು. ಈ ಸತ್ಯದ, ಶೌರ್ಯದ ಇತಿಹಾಸವನ್ನು ಇಲ್ಲಿವರೆಗೆ ಮುಚ್ಚಿಡಲಾಗಿತ್ತು ಎಂದು ಅವರು ಭೀಮಾ ಕೊರೆಗಾಂವ್ ಇತಿಹಾಸದ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಿಲಾಸ್ ಮೊರೆ, ಸಂಜುಕುಮಾರ್ ಭಾವಿಕಟ್ಟೆ, ಮಾರುತಿ ಭಾವಿಕಟ್ಟೆ, ನಾರಾಯಣ ಮೊರೆ, ಕಿಸಾನ್ ವಾಘಮಾರೆ, ಕೈಲಾಸ್ ಭಾವಿಕಟ್ಟೆ, ರಾಜಕುಮಾರ್ ಕೋಟಗೆರಾ, ಪ್ರದೀಪ್ ಗುಪ್ತಾ ಹಾಗೂ ತಾನಾಜಿ ಕೋಟಗೆರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.