ಬೀದರ್: ಎಮ್ ಜಿ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕರ ವರ್ಗಾವಣೆಗೆ ಬಿಎಸ್ಪಿ ಆಗ್ರಹ
ಬೀದರ್: ಬಸವಕಲ್ಯಾಣ ತಾಲೂಕು ಪಂಚಾಯತ್ ಎಮ್ ಜಿ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕ ಸಂತೋಷ್ ಚವ್ಹಾಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಬಿಎಸ್ಪಿ ಆಗ್ರಹ ಮಾಡಿದೆ.
ಇಂದು ತಾಲ್ಲೂಕಿನ ಕೆಡಿಪಿ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಶರಣು ಸಲಗರ್ ಅವರನ್ನು ಮನವಿ ಪತ್ರ ಸಲ್ಲಿಸುವುದರ ಮೂಲಕ ತಕ್ಷಣವೇ ಎಮ್ ಜಿ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕ ಸಂತೋಷ್ ಚವ್ಹಾಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕೇಳಿಕೊಂಡರು.
ಸಂತೋಷ್ ಚವ್ಹಾಣ ಅವರು ಕರ್ತವ್ಯ ಸಮಯದಲ್ಲಿ ಕಚೇರಿಯಲ್ಲಿ ಇರುವುದಿಲ್ಲ. ಅವರು ತಮ್ಮ ಸ್ವಂತ ಮನೆಯಲ್ಲಿಯೇ ಕಂಪ್ಯೂಟರ್ ಆಪರೇಟರ್ ಅವರನ್ನು ಕರೆಸಿಕೊಂಡು ಕೆಲಸ ಮಾಡುತ್ತಾರೆ. ಇವರ ಮನೆಯೇ ಇವರಿಗೆ ಸರಕಾರಿ ಕಚೇರಿಯಾಗಿದೆ. ಸಂಪೂರ್ಣವಾಗಿ ಇವರು ರಾಜಕೀಯ ಮಾಡುತ್ತಿದ್ದು, ತಮಗೆ ಬೇಕಾಗಿರುವವರ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ. ಹಾಗೆಯೇ ಸುಮಾರು ರಾತ್ರಿ 10 ಗಂಟೆಯ ನಂತರದಲ್ಲಿ ಗೂಗಲ್ ಶೀಟಿ ಲಾಗಿನ್ ಮಾಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.
ಸುಮಾರು ವರ್ಷಗಳಿಂದ ವರ್ಗಾವಣೆಯಾಗದೇ ತಾಲ್ಲೂಕಿನಲ್ಲಿಯೇ ಬಿಡು ಬಿಟ್ಟಿದ್ದಾರೆ. ಇದೇ ತಾಲ್ಲೂಕಿನವರಾದ ಇವರು ತಮ್ಮ ಮನಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ತಕ್ಷಣವೇ ಇವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಶಂಕರ್ ಫುಲೆ, ಚೇತನ್ ಕಾಡೆ, ರಾಜು ಸೂರ್ಯವಂಶಿ, ಅಶೋಕ್ ಮಂಠಾಳಕರ್, ಫುಲಿಂದ್ ಹುಬ್ಬರೆ, ಮಾರುತಿ ಕಾಂಬಳೆ, ಸಾಗರ್ ರಾಯಗೊಳ್, ಅಂಬರೀಷ್ ಗಜರೆ, ವಿಜಯಕುಮಾರ್ ರನ್ನಮಲ್ಲೇ ಹಾಗೂ ಪ್ರಫುಲ್ ಗಾಯಕವಾಡ್ ಸೇರಿದಂತೆ ಇತರರು ಇದ್ದರು.