ಬೀದರ್ | ಅಮಿತ್ ಶಾ ಅವರ ಗಡಿಪಾರಿಗೆ ಮಹಾನಾಯಕ್ ರಕ್ಷಣಾ ವೇದಿಕೆ ಆಗ್ರಹ

Update: 2024-12-20 09:49 GMT

ಬೀದರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡಲು ಮಹಾನಾಯಕ್ ರಕ್ಷಣಾ ವೇದಿಕೆ ಆಗ್ರಹ ಮಾಡಿದೆ.

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿ, ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಅವರ ಕುರಿತು ಡಿ.17 ರಂದು ಸಂಸತ್ತಿನಲ್ಲಿ ʼಅಂಬೇಡ್ಕರ್ ಅಭಿ ಏಕ್ ಫ್ಯಾಶನ್ ಹೋಗಯಾ ಹೈ ಇತ್ನಾ ನಾಮ್ ಅಗರ್ ಭಗವಾನ ಕಾ ಲಿಯಾ ತೋ ಸಾತ್ ಜನ್ಮ ತಕ್ ಸ್ವರ್ಗ ಮಿಲ್ ಜಾತಾ ಥಾʼ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಹೇಳನೆ ಮಾಡಿದ್ದಾರೆ. ಇದು ಸಂವಿಧಾನ ವಿರುದ್ಧವಾದ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸದರು.

ಅಮಿತ್ ಶಾ ಅವರು ಸಂಸತ್ತಿನಲ್ಲಿ ಡಾ.ಅಂಬೇಡ್ಕರ್ ರವರಿಗೆ ಅವಹೇಳನ ಮಾಡಿದ್ದಾರೆ. ಇವರನ್ನು ತಕ್ಷಣವೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದ್ರೋಹದ ಅಡಿಯಲ್ಲಿ ಪ್ರಕರಣದ ದಾಖಲಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಹಾನಾಯಕ್ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಗೋಪಾಲ್ ದೊಡ್ಡಿ, ಜಿಲ್ಲಾ ಉಪಾಧ್ಯಕ್ಷ ದಿಲೀಪ್ ರೇಖಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಹರ್ಷಿತ್ ದಾಂಡೇಕರ್, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್ ಬಾಬಶೆಟ್ಟಿ, ಪ್ರವೀಣ್ ದೊಡ್ಮನಿ, ದಿಲೀಪ್ ಮೀರಾಗಂಜಕರ್, ಪ್ರವೀಣ್ ಪ್ಯಾಗೆ, ಮಹಾದೇವ್ ಮಾರುತಿ, ಶಿವಕುಮಾರ್ ಚಿಂಚೋಳಿಕರ್, ಅರವಿಂದ್ ಕಂಟೆ, ಪ್ರಥ್ವಿರಾಜ್ ಮುಧೋಳಕರ್ ಹಾಗೂ ಸಂಜುಕುಮಾರ್ ರತ್ನಾಕರ್ ಸೇರಿ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News