ಬೀದರ್ ಮಹಾನಗರ ಪಾಲಿಕೆ ಪ್ರಸ್ತಾಪ : ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಉಭಯ ಸಚಿವರು

Update: 2025-04-15 21:26 IST
ಬೀದರ್ ಮಹಾನಗರ ಪಾಲಿಕೆ ಪ್ರಸ್ತಾಪ : ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಉಭಯ ಸಚಿವರು

ರಹೀಮ್ ಖಾನ್, ಈಶ್ವರ್ ಖಂಡ್ರೆ 

  • whatsapp icon

ಬೀದರ್ : ಜಿಲ್ಲೆಯ ನಗರಸಭೆಯೊಂದಿಗೆ 6 ಗ್ರಾಮ ಪಂಚಾಯತಿಗಳ 16 ಗ್ರಾಮಗಳನ್ನು ಸೇರಿಸಿ ದೊಡ್ಡ ನಗರ ಪ್ರದೇಶ ಎಂದು ಘೋಷಿಸಲು ಮತ್ತು ಬೀದರ್ ಮಹಾನಗರ ಪಾಲಿಕೆ ಪ್ರದೇಶ ಎಂದು ನಿರ್ದಿಷ್ಟಪಡಿಸಲು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ನಾಳೆ ಮುಖ್ಯಮಂತ್ರಿಗಳು ನಗರಕ್ಕೆ ಭೇಟಿ ನೀಡುತ್ತಿದ್ದು, 2,025 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಈಗ ಈ ಗೆಜೆಟ್ ಅಧಿಸೂಚನೆ ಹೊರಬಿದ್ದಿದ್ದು, ಜಿಲ್ಲೆಯ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬೀದರ್ ಮಹಾನಗರ ಪಾಲಿಕೆ ಆಗುವುದರಿಂದ ನಗರದ ಅಭಿವೃದ್ಧಿ ವೇಗ ಪಡೆಯಲಿದೆ. ಹಾಗೆಯೇ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಅನುಕೂಲವಾಗುತ್ತದೆ ಎಂದು ಸಚಿವರಿಬ್ಬರೂ ತಿಳಿಸಿದ್ದಾರೆ.

ಸಂಸದರ ಹರ್ಷ: ಬೀದರ್ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಉನ್ನತೀಕರಿಸುವ ನಿರ್ಧಾರ ಮಾಡಿ ಪ್ರಸ್ತಾವನೆಯ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಬಗ್ಗೆ ಸಂಸದ ಸಾಗರ್ ಖಂಡ್ರೆ ಅವರು ಹರ್ಷ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬೀದರ್ ನಗರದ ಜನತೆಗೂ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News