ಬೀದರ್ | ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ : ಪಾಂಡುರಂಗ ಬೆಲ್ದಾರ್

Update: 2024-11-20 17:02 GMT

ಬೀದರ್ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಪಾಂಡುರಂಗ ಬೆಲ್ದಾರ್ ಅವರನ್ನು ತಾಲ್ಲೂಕಿನ ಯರನಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸನ್ಮಾನಿಸಲಾಯಿತು.

ಬೆಲ್ದಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರೌಢಶಾಲಾ ಶಿಕ್ಷಕರ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಚುನಾವಣೆಯಲ್ಲಿ ತಮ್ಮನ್ನು ಆಯ್ಕೆಗೊಳಿಸಿರುವ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ ಎಂದರು.

ಮುಖ್ಯಶಿಕ್ಷಕ ಮಚ್ಚೇಂದ್ರ ಗಾಯಕವಾಡ್, ಶಿಕ್ಷಕರಾದ ಶಾಮಸುಂದರ್, ರಮೇಶ್, ಹೇಮಲತಾ ರೆಡ್ಡಿ, ರಂಜನಿ, ಸುರೇಖಾ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮನೋಹರ್ ಬಾಬಶೆಟ್ಟಿ, ಬಾಲಾಜಿ, ಅನಿಲಕುಮಾರ್ ಮುಳೆ, ನಿರ್ಮಲಾ, ಮಮತಾ ಗಂಗವಾರ್ ಮುಂತಾದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News